ಕಾಸರಗೋಡಿನಲ್ಲಿ ಶಾಲಾ ಬಸ್–ಬೈಕ್ ಅಪಘಾತ; ಯುವಕ ಸಾವು

ಕಾಸರಗೋಡು: ಶಾಲಾ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಕಾಸರಗೋಡಿನ ಬೋವಿಕ್ಕಾನ ಸಮೀಪದ ಪೊವ್ವಲ್ ಮಾಸ್ತಿಕುಂಡು ಎಂಬಲ್ಲಿ ನಡೆದಿದೆ.

ಮೃತರನ್ನು ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲಿನ ಎಸ್. ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ. ಅವರು ಚೆರ್ಕಳ ಕಡೆಯಿಂದ ಗಾಳಿಮುಖದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಸ್ತಿಕುಂಡು ಬಳಿ ಎದುರಿನಿಂದ ಬರುತ್ತಿದ್ದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಮ್ಮಾಸ್ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!