ಮಂಜೇಶ್ವರದಲ್ಲಿ 33ರ ಹರೆಯದ ಯುವಕ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಇಚ್ಚಂಗೋಡು ಚಿತ್ತೂರು ನಿವಾಸಿ ದಿ| ಕುಂಞಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33) ಎಂಬವರು ತಮ್ಮ ಮನೆಯ ಹಾಲ್‌ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

​ಘಟನೆ ನಡೆದ ರಾತ್ರಿ ಇವರ ತಾಯಿ ಆಯಿಷಾಬಿ ಅವರು ಮಗಳ ಮನೆಗೆ ತೆರಳಿದ್ದರಿಂದ, ಯುವಕ ಮನೆಯಲ್ಲಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ.

ಶನಿವಾರ ಬೆಳಿಗ್ಗೆ ಸ್ಥಳೀಯರು ಮನೆಗೆ ಬಂದು ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.

​ಮಾಹಿತಿ ತಿಳಿದ ಕೂಡಲೇ ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!