ಮಂಜೇಶ್ವರ: ಇಚ್ಚಂಗೋಡು ಚಿತ್ತೂರು ನಿವಾಸಿ ದಿ| ಕುಂಞಪಳ್ಳಿ ಎಂಬವರ ಪುತ್ರ ಅಬ್ದುಲ್ ಸಲೀಂ (33) ಎಂಬವರು ತಮ್ಮ ಮನೆಯ ಹಾಲ್ನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ನಡೆದ ರಾತ್ರಿ ಇವರ ತಾಯಿ ಆಯಿಷಾಬಿ ಅವರು ಮಗಳ ಮನೆಗೆ ತೆರಳಿದ್ದರಿಂದ, ಯುವಕ ಮನೆಯಲ್ಲಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ.

ಶನಿವಾರ ಬೆಳಿಗ್ಗೆ ಸ್ಥಳೀಯರು ಮನೆಗೆ ಬಂದು ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ಕೂಡಲೇ ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಗತ್ಯ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

