ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ಸ್ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ

​ಕಾಸರಗೋಡು: ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಬೆಲೆಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡಿದ್ದ ಮಧ್ಯಪ್ರದೇಶ ಮೂಲದ ಬರೇದ್ರ ರಾವುತ್ತರ್ (37) ಎಂಬಾತನನ್ನು ಕಾಸರಗೋಡು ರೈಲ್ವೇ ಪೊಲೀಸರು 24 ತಾಸಿನೊಳಗೆ ಬಂಧಿಸಿದ್ದಾರೆ.

​ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದ ಮಲಪ್ಪುರಂ ನಿವಾಸಿ ಪಿ. ಸನೂಪ್ ರಹ್ಮಾನ್ ಅವರ 89,000 ರೂ. ಮೌಲ್ಯದ ಐಪ್ಯಾಡ್, ಮೊಬೈಲ್ ಹಾಗೂ ಪವರ್ ಬ್ಯಾಂಕ್ ಇದ್ದ ಬ್ಯಾಗನ್ನು ರಾತ್ರಿ ವೇಳೆ ಕಳವುಗೈಯಲಾಗಿತ್ತು.

ಕಾಸರಗೋಡು ನಿಲ್ದಾಣದಲ್ಲಿ ರೈಲು ನಿಂತಾಗ ಕಳ್ಳತನದ ಬಗ್ಗೆ ಅರಿತ ಸಂತ್ರಸ್ತರು ತಕ್ಷಣವೇ ಪೊಲೀಸರಿಗೆ ದೂರು ನೀಡಿದರು.
​ದೂರಿನ ಬೆನ್ನಲ್ಲೇ ಎಸ್‌ಐ ಸನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಹೊಸ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

SHARE
Loading spinner

One thought on “ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ಸ್ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ

  1. The odds here are actually quite competitive compared to others I’ve used. Everything feels legit and the support team is very helpful. Give ph365ph a try.

    Loading spinner

Leave a Reply

Your email address will not be published. Required fields are marked *

error: Content is protected !!