ಮನೆಯಿಂದ ಹೊರಟ ಪ್ರಸಾದ್ ಶೆಟ್ಟಿ ನಾಪತ್ತೆ; ಪೊಲೀಸರಿಂದ ಶೋಧ

​ಮಂಜೇಶ್ವರ : ಉಪ್ಪಳ ಬಿ.ಟಿ. ರಸ್ತೆಯ ಪ್ರಸಾದ್ ಶೆಟ್ಟಿ (44) ಎಂಬವರು ಮನೆಯಿಂದ ತೆರಳಿದವರು ವಾಪಸ್ ಬಾರದಿರುವ ಕುರಿತು ಅವರ ತಂದೆ ಲಕ್ಷ್ಮಣ ಶೆಟ್ಟಿ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

​ಆಗಸ್ಟ್ 22 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರಸಾದ್ ಶೆಟ್ಟಿ ಮನೆಯಿಂದ ಹೊರಗೆ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅವಿವಾಹಿತರಾದ ಇವರು ಹಿಂದೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!