ಮಂಜೇಶ್ವರ : ಉಪ್ಪಳ ಬಿ.ಟಿ. ರಸ್ತೆಯ ಪ್ರಸಾದ್ ಶೆಟ್ಟಿ (44) ಎಂಬವರು ಮನೆಯಿಂದ ತೆರಳಿದವರು ವಾಪಸ್ ಬಾರದಿರುವ ಕುರಿತು ಅವರ ತಂದೆ ಲಕ್ಷ್ಮಣ ಶೆಟ್ಟಿ ಅವರು ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಆಗಸ್ಟ್ 22 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರಸಾದ್ ಶೆಟ್ಟಿ ಮನೆಯಿಂದ ಹೊರಗೆ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅವಿವಾಹಿತರಾದ ಇವರು ಹಿಂದೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

