ಕಾಸರಗೋಡು : ಪಳ್ಳಿಕೆರೆ ತಚ್ಚಂಗಾಡ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಗುದ್ದಿದ ಪರಿಣಾಮ, ಕಾಂಗ್ರೆಸ್ ಪಳ್ಳಿಕೆರೆ ಮಂಡಲ ಸಮಿತಿ ಕಾರ್ಯದರ್ಶಿ ಕೆ. ಧನಂಜಯ ಕರುವಾಕೋಡ್ (64) ಅವರು ಸಾವನ್ನಪ್ಪಿದ್ದಾರೆ.

ಸೂಪರ್ ಮಾರ್ಕೆಟ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಿ ತಚ್ಚಂಗಾಡ್ ಸರಕಾರಿ ಹೈಸ್ಕೂಲ್ ಎದುರು ರಸ್ತೆ ದಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

