ಕಾಸರಗೋಡು : ನಾನಂದಕುಳಿಯಲ್ಲಿ 11 ವರ್ಷದ ಬಾಲಕ ಸಾವು ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ದುರ್ಘಟನೆ

ಕಾಸರಗೋಡು : ಮಡಿಕೈ ಸಮೀಪದ ನಾನಂದಕುಳಿ ಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಕಾಂಞ್ಞರ ಪೊಯಿಲ್ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ, ರಾಜೇಶ್-ನೀತು ದಂಪತಿಯ ಏಕೈಕ ಪುತ್ರ ಅನೈಕ್ ಸಾವನ್ನಪ್ಪಿದ ದುರ್ದೈವಿ.

​ಶಾಲೆ ಮುಗಿಸಿ ಮನೆಗೆ ಬಂದಿದ್ದ ಅನೈಕ್, ಪಕ್ಕದ ಅಂಗನವಾಡಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಧ್ವಜಸ್ತಂಭದ ಪ್ಲಾಸ್ಟಿಕ್ ಹಗ್ಗ ಕುತ್ತಿಗೆಗೆ ಸಿಲುಕಿದೆ.

ಸಂಜೆ ಆಟೋ ಚಾಲಕರೊಬ್ಬರು ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!