ಕಾಸರಗೋಡು : ಕಣ್ಣೂರಿನ ತೆಕ್ಕಿಬಜಾರ್‌ನ ಅಂಗಡಿಯೊಂದರಲ್ಲಿ ದುರಸ್ತಿಗಾಗಿ ಇರಿಸಲಾಗಿದ್ದ ರೂ.18,000 ಮೌಲ್ಯದ ಮೋಟಾರ್ ಪಂಪನ್ನು ಕದ್ದಿದ್ದ ಕಾಸರಗೋಡು ನಿವಾಸಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಬಂಧಿತ ಆರೋಪಿಯನ್ನು ಚಿಟ್ಟಾರಿಕಲ್ ಕಡುಮೇನಿಯ ಥೋಮಸ್ (52) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 6ರಂದು ಸಲಾಂ ಎಂಬುವರು ತಮ್ಮ ಮೋಟಾರ್ ಪಂಪನ್ನು ದುರಸ್ತಿಗೆಂದು ಅಂಗಡಿಯಲ್ಲಿಟ್ಟಿದ್ದರು. ಅದು ಕಳವಾದ ಬಗ್ಗೆ ನೀಡಿ ದೂರಿನನ್ವಯ ತನಿಖೆ ಆರಂಭಿಸಿದ ಕಣ್ಣೂರು ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಶಂಕಿತ ವ್ಯಕ್ತಿಯ ಸುಳಿವು ಆಧರಿಸಿ ಜಾಲ ಬೀಸಿದ ಪೊಲೀಸರು, ಆರೋಪಿ ಥೋಮಸ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

