ಬೈಕ್‌ನಲ್ಲಿ ಬಂದು ಮಹಿಳೆಯ ಸರ ಕಳವು ಮಾಡಿದ್ದ ಪ್ರಕರಣದ ಎರಡನೇ ಆರೋಪಿ ಬಂಧನ

​ಮಂಜೇಶ್ವರ: ಬೈಕ್‌ನಲ್ಲಿ ಬಂದು ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಳಿವಿನಲ್ಲಿದ್ದ ಎರಡನೇ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

​ಕುಂಬಳೆ ಬಂಬ್ರಾಣದ ಇಂದು ಗುರಿ ನಿವಾಸಿ ಚಂದ್ರಹಾಸ್ ಅವರ ಪುತ್ರ ಸುಧೀಶ್ ಬಂಧಿತ ಆರೋಪಿ.

​ಕಳೆದ ಜೂನ್ 22ರಂದು ಸಂಜೆ ಮಂಜೇಶ್ವರದ ಹೊಸಂಗಡಿ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ಮೊದಲನೇ ಆರೋಪಿ ಕುಂಬಳೆ ಬಂಬ್ರಾಣ ನಿವಾಸಿ ಸಂದೀಪ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಸುಧೀಶ್‌ನನ್ನು ಸೆಪ್ಟೆಂಬರ್ 23 ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

​ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ವಿಷ್ಣುಪ್ರಸಾದ್ ನೇತೃತ್ವದಲ್ಲಿ ಎಸ್‌ಐ ಶಬರಿ ಕೃಷ್ಣನ್, ಎಎಸ್‌ಐ ಅಜಿತ್ ಹಾಗೂ ಸಿಪಿಒ ಬಿನೀಶ್ ಅವರಿದ್ದ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿ ಕಾಸರಗೋಡು ಜಿಲ್ಲಾ ಜೈಲಿಗೆ ರವಾನಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!