ಮಂಜೇಶ್ವರ: ಕಳೆದುಹೋದ ಮೂರು ಪವನ್ ತೂಕದ ಚಿನ್ನದ ಸರವನ್ನು ಪತ್ತೆಹಚ್ಚಿ, ಅದನ್ನು ಮೂಲ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಶಶಿ ಎಂಬುವವರು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೊಸಂಗಡಿ ಬಳಿ ಆರಿಮಲ ನಿವಾಸಿಯೊಬ್ಬರ 3 ಪವನ್ ಚಿನ್ನದ ಸರ ಕಳೆದುಹೋಗಿತ್ತು. ಈ ಸರ ಶಶಿ ಅವರಿಗೆ ಸಿಕ್ಕಿದ್ದು, ಯಾವುದೇ ಸ್ವಾರ್ಥವಿಲ್ಲದೆ ತಕ್ಷಣವೇ ಮಾಲೀಕರನ್ನು ಪತ್ತೆಹಚ್ಚಿ ಹಿಂತಿರುಗಿಸಲು ಮುಂದಾಗಿದ್ದಾರೆ.

ಸಮದ್ ಅರಿಮಲ ಸಾನಿಧಿ ಕಡಂಬಾರ್ ಅವರ ಸಮ್ಮುಖದಲ್ಲಿ ಈ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಶಶಿ ಅವರ ಈ ಮಾದರಿ ಪ್ರಾಮಾಣಿಕತೆ ಮತ್ತು ಸತ್ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

