ಬಡಾಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಮಿತಿ ರೂಪೀಕರಣ ಸಭೆ

ಮಂಜೇಶ್ವರ : ಬಡಾಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಮಿತಿ ರೂಪೀಕರಣ ಸಭೆ ಇಂದು ನಡೆಯಿತು.


ಸೆಪ್ಟೆಂಬರ್ 23ರಂದು ತಂತ್ರಿಯವರ ಆಗಮನದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡಿದ್ದು ಪ್ರಾರ್ಥನೆ, ಬಾಲಾಲಯದಲ್ಲಿ ರಾಕ್ಷೋಘ್ನ, ವಾಸ್ತು ಹವನ ಹಾಗೂ ರಾತ್ರಿ ಮಹಾಪೂಜೆ ನಡೆಯಿತು.

ಇಂದು ಗಣಪತಿ ಹೋಮ, ಮಹಾಪೂಜೆ ಹಾಗೂ ಸಂಕೋಚ ವಿಧಿ ಪ್ರಾರಂಭ ನಡೆದು ಬಳಿಕ ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠೆ, ಕಲಶಾಭಿಷೇಕ, ಗೋಪುರ ಶಿಥಿಲೀಕರಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು . ಬೆಳಗ್ಗೆ 11 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಮಧ್ಯಾಹ್ನ ನಡೆದ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಮಿತಿಯ ರೂಪೀಕರಣ ನಡೆಸಿ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು. ಬಳಿಕ ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು ಕ್ಷೇತ್ರದ ತಂತ್ರಿವರ್ಯರು,ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರು , ಆಡಳಿತ ಮೊತ್ತೇಸರರು ಮತ್ತು ಮೊತ್ತೇಸರರು ಊರ ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!