ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ, ದಕ್ಷಿಣ ರಾಜ್ಯಗಳು ಇದರಲ್ಲಿ ಮುಂಚೂಣಿ – ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ, ಯೇನಪೋಯ ವೈದ್ಯಕೀಯ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಅಂಗಾಂಗ ದಾನ ದಿನಾಚರಣೆ 2025 ಕಾರ್ಯಕ್ರಮವು ಎಂಡ್ಯೂರೆನ್ಸ್ ಸಭಾಂಗಣ, ವೈದಿಕೀಯ ಕಾಲೇಜು ದೇರಳಕಟ್ಟೆ ಮಂಗಳೂರು ಇಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ನಾವು ಮಡಿದ ಬಳಿಕ ಮಣ್ಣಲ್ಲಿ ಮಣ್ಣಾಗುವಾಗ ನಮ್ಮ ದೇಹದ ಅಂಗಾಂಗವು ಕೂಡ ಮಣ್ಣಲ್ಲಿ ಮಣ್ಣಾಗುತ್ತದೆ. ಆದರೆ ಒಂದು ವೇಳೆ ಅಂಗಾಂಗವನ್ನು ದಾನ ಮಾಡಿದ್ದೆ ಆದಲ್ಲಿ ಇನ್ನೊಬ್ಬರ ಜೀವವನ್ನು ಉಳಿಸುವಲ್ಲಿ ಅದು ಪ್ರಧಾನ ಪಾತ್ರವಹಿಸುತ್ತದೆ. ಒಂದು ಜೀವ ಮುಆ ಸಂದರ್ಭದಲ್ಲಿದಾನ ಮಾಡುವುದರಿಂದ ಮತ್ತೊಬ್ಬರ ಬಾಳು ಬೆಳಕಾಗುತ್ತದೆ ಹೃದಯ ಕರಳು ಕಿಡ್ನಿ ಕಣ್ಣು ಚರ್ಮ ಈ ಅಂಗಾಂಗ ವನ್ನು ದಾನ ಮಾಡಬಹುದು. ಅಂಗಾಂಗ ದಾನಕ್ಕೆ ಯಾವ ಧರ್ಮವು ಮತವು ತೊಡಕಾಗದು. ಸಾವಿನ ಬಳಿಕ ಮಾಡುವ ಅಂಗಾಂಗದ ನವು ಅಂಗಾಂಗ ದಾನವು ಸತ್ತ ಮನುಷ್ಯನಿಗೆ ಸ್ವರ್ಗ ಪ್ರಾಪ್ತಿಯಷ್ಟೇ ಪ್ರಾಪ್ತಿಗೆ ಅನುವು ಮಾಡಿಕೊಡುವುದು. ಅಂಗಾಂಗ ದಾನದಲ್ಲಿ ಕರ್ನಾಟಕ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ ದಕ್ಷಿಣದ ಇತರ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ.

ರಾಜ್ಯದಲ್ಲಿ ಇದುವರೆಗೂ ಅಂಗಾಂಗಗಳಿಗೆ ಕಾಯುತ್ತಿರುವ ರೋಗಿಗಳ ಒಟ್ಟು ಸಂಖ್ಯೆಯನ್ನು ಹೇಳುತ್ತಾ, 4582 ಮೂತ್ರಪಿಂಡಗಳಿಗಾಗಿ , 583 ಯಕೃತ್ ಅಂಗಾಂಗಕ್ಕಾಗಿ, 133 ಹೃದಯಕ್ಕಾಗಿ, 31 ಶ್ವಾಸಕೋಶಕ್ಕಾಗಿ , 13 ಹೃದಯ ಮತ್ತು ಶ್ವಾಸಕೋಶಕ್ಕಾಗಿ, 23 ಯಕೃತ್ ಮತ್ತು ಮೂತ್ರಪಿಂಡ ಕ್ಕಾಗಿ, 21 ಉತ್ತರ ಪಿಂಡ ಮತ್ತು ಮೇದೋಜೀರಕ ಗ್ರಂಥಿಗಾಗಿ, 1 ಮೂತ್ರ ಪಿಂಡ ಮತ್ತು ಹೃದಯ ಕ್ಕಾಗಿ ಕಾಯುತ್ತಾ ಇದ್ದಾರೆ. ಪುರುಷರಿಗಿಂತ ಮಹಿಳೆಯರು ಅಂಗಾಂಗ ದಾನವನ್ನು ಜಾಸ್ತಿ ಮಾಡುವುದು ಗಮನಾರ್ಹವಾಗಿದೆ.ಬಳಿಕ ಅಂಗಾಂಗ ದಾನವನ್ನು ಮಾಡಿದ ಕುಟುಂಬದ ಓರ್ವ ಸದಸ್ಯರಿಗೆ ಸನ್ಮಾನವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದನಾರ್ವಡೆ ವಿನಾಯಕ್ ಕರ್ಭಾರಿ ಎ.ಎನ್, ಯೇನಪೋಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಬಿ ಎಚ್ ಶ್ರೀಪತಿ ರಾವ್ , ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ, ಮುಂತಾದ ಗಣ್ಯರು ಉಪಸ್ಥಿತಿ ಇದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!