ಕರಾವಳಿಯ ದ.ಕ ಉಡುಪಿ ಕಾಸರಗೋಡು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ( ಸುಳ್ಯ ತಾಲ್ಲೂಕು ಹೊರತುಪಡಿಸಿ ) ಮುಂಜಾನೆ/ ಬೆಳಿಗ್ಗೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ದ.ಕ. ದ ಘಟ್ಟಪ್ರದೇಶಗಳ ಸುತ್ತಮುತ್ತ ನಿನ್ನೆ ಸಂಜೆ ಗುಡುಗು ಮಳೆಯಾಗಿತ್ತು. ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ತಾಲ್ಲೂಕುಗಳಲ್ಲಿಯೂ ಸಾಧಾರಣ ಮಳೆಯಾಗಿದೆ.


ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ಜಿಲ್ಲೆಗಳಲ್ಲಿ ಮೇಲ್ಮೈ ಸುಳಿಗಾಳಿಗಳ ಕಾರಣ ಹಗಲು ಮೋಡದ ವಾತಾವರಣ ಇರಲಿದ್ದು ಹಗಲು ಗುಡುಗು ಸಹಿತ ತುಂತುರು ಅಥವಾ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ತೀರದಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು. ಮಧ್ಯಾಹ್ನ ನಂತರ ಮಳೆ ಕಡಿಮೆ ಆಗಬಹುದು. ಉ.ಕ. ಜಿಲ್ಲೆಯ ಕರಾವಳಿ ತೀರದ ತಾಲ್ಲೂಕುಗಳಲ್ಲಿಯೂ ಹಗಲು ಮಳೆಯಾಗುವ ಸಾಧ್ಯತೆ ಇದೆ. ಸಂಜೆ ದ.ಕ ಉಡುಪಿ ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೂ ಪಶ್ಚಿಮದ ಗಾಳಿ ಇದ್ದಾಗ ಪೂರ್ವದ ಮೋಡದ ಮಳೆಯ ಸಾಧ್ಯತೆಗಳು ಕಡಿಮೆ ಆಗಬಹುದು. ಅಕ್ಟೋಬರ್ 10 ತನಕ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸಂಜೆಯ ಗುಡುಗು ಮಳೆ ಮುಂದುವರೆಯಬಹುದು.

ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಹಾಸನ ಜಿಲ್ಲೆಗಳಲ್ಲಿ ಇವತ್ತು ಸಾಧಾರಣ ಮಳೆ ಮುನ್ಸೂಚನೆ ಇದೆ. ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಸಾಗರ ಹೊಸನಗರ ತೀರ್ಥಹಳ್ಳಿ ಶೃಂಗೇರಿ ಮೂಡಿಗೆರೆ ಸಕಲೇಶಪುರ ಮಡಿಕೇರಿ ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಲಿದ್ದು ಉತ್ತಮ ಮಳೆಯಾಗಬಹುದು. ಮಲೆನಾಡಿನಲ್ಲಿ ಒಂದೆರಡು ದಿನ ಸಾಧಾರಣ ಮಳೆ ನಂತರ ಅಕ್ಟೋಬರ್ 10 ತನಕ ಅಲ್ಲಲ್ಲಿ ಮಳೆ ಮುಂದುವರೆದು ನಂತರ ಮಳೆ ಪೂರ್ತಿ ಕಡಿಮೆ ಆಗಬಹುದು.
ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಚಾಮರಾಜನಗರ ಮೈಸೂರು ಮಂಡ್ಯ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ತುಮಕೂರು ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ ಹೆಚ್ಚಿನ ಪ್ರದೇಶಗಳಲ್ಲಿ (ತುಂತುರು – ಸಾಮಾನ್ಯ – ಸಾಧಾರಣ) ಮಳೆಯ ಮುನ್ಸೂಚನೆ ಇದೆ. ನಾಳೆ ನಾಡಿದ್ದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ ಆ 8 ರಿಂದ ಮಳೆ ಪೂರ್ತಿ ಕಡಿಮೆ ಆಗಬಹುದು.
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಬಾಗಲಕೋಟೆ ಗದಗ ಹಾವೇರಿ ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಸಮೀಪ ಅರಬ್ಬೀಸಮುದ್ರದಲ್ಲಿ ಸಣ್ಣ ಪ್ರಮಾಣದ ಸರ್ಕ್ಯುಲೇಷನ್ ಇರುವ ಕಾರಣ ಇವತ್ತು ಮಳೆಯಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಮುಂಗಾರು ಹಿಂತೆಗೆತವಾಗುವ ಸಂದರ್ಭದಲ್ಲಿ ಹಿಂಗಾರು ಆಗಮನದ ಮೊದಲು ಬಂಗಾಳ ಕೊಲ್ಲಿ ಮತ್ತು ಅರಬ್ಬೀಸಮುದ್ರದಲ್ಲಿ ಸಣ್ಣ ಸಣ್ಣ ಸೈಕ್ಲೋನಿಕ್ ಸರ್ಕ್ಯುಲೇಷನ್ ಗಳು ಸಂಭವಿಸುತ್ತದೆ. ಈ ಮೇಲ್ಮೈ ಸುಳಿಗಾಳಿಗಾಳಿಗಳ ಕಾರಣದಿಂದ ಉಂಟಾಗುವ ತೇವಾಂಶಯುಕ್ತ ಮೋಡ ಮತ್ತು ಗಾಳಿಯು ದಕ್ಷಿಣದಲ್ಲಿ ಕೇರಳ ತಮಿಳುನಾಡು ಮೂಲಕ ಪ್ರವೇಶಿಸಿ ಕೇರಳ ಕರ್ನಾಟಕ ತಮಿಳುನಾಡಿನ ಅಲ್ಲಲ್ಲಿ ಮಳೆಯಾಗುತ್ತಿದೆ. ಈ ಗಾಳಿಯ ತಿರುಗುವಿಕೆ ಕಾರಣ ನಿನ್ನೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾದರೂ ನಾಳೆ ಮೋಡ ಕಡಿಮೆ ಆಗಬಹುದು. ಸಂಜೆಯ ಗುಡುಗು 3-4 ದಿನ ಮುಂದುವರೆಯಬಹುದು.



I love how transparent they are with their terms and conditions. No hidden surprises, just a great gaming experience. phcash24ph is the way to go.