ಮಂಜೇಶ್ವರ : ಬಾಯಾರು ಸಮೀಪದ ಬಳ್ಳೂರು ತೆಂಕಮಜಲು ನಿವಾಸಿ, 50 ವರ್ಷದ ಮೋಹನ ನಾಯ್ಕ ಅವರ ಮೃತದೇಹ ಸ್ಥಳೀಯ ತೋಟದ ಕೆರೆಯಲ್ಲಿ ದುರಂತ ರೀತಿಯಲ್ಲಿ ಪತ್ತೆಯಾಗಿದೆ.

ಶನಿವಾರ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದ ಇವರು ಮಧ್ಯಾಹ್ನವಾದರೂ ಹಿಂತಿರುಗಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಕೆರೆಯ ದಂಡೆಯ ಮೇಲೆ ಅವರ ಚಪ್ಪಲಿ ಕಂಡುಬಂದಿದೆ. ತಕ್ಷಣವೇ ನೀಡಿದ ಮಾಹಿತಿಯಂತೆ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದರು.

ಇವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ಮೋಹನ ನಾಯ್ಕ ಅವರು ಈ ಹಿಂದೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪೋದಲ್ಲಿ ತಾತ್ಕಾಲಿಕ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಕುಟುಂಬಸ್ಥರಿಗೆ ಬಿಟ್ಟು ಕೊಡಲಾಯಿತು.


Absolute game changer for me. The variety of rooms and the community vibe are just amazing. I spend most of my free time on vnhitclubpro now.
Absolute game changer for me. The variety of rooms and the community vibe are just amazing. I spend most of my free time on vnhitclubpro now.