ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ ಯುವಕ ಸಾವು

ಕಾಸರಗೋಡು : ಮಂಗಳೂರಿನಿಂದ ತೃಶೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ 18 ವರ್ಷದ ಯುವಕನೊಬ್ಬ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.ಬಿಹಾರದ ನೌಸಾ ನಿವಾಸಿ ಮುಹಮ್ಮದ್ ಅವರ ಪುತ್ರ ಮುಹಮ್ಮದ್ ಶಹನ್‌ಬಾಚ್ ಸಾವನ್ನಪ್ಪಿದ ದುರ್ದೈವಿ.


ಬಾನುವಾರ ಸ್ನೇಹಿತರೊಂದಿಗೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗುತ್ತಿದ್ದಾಗ, ದಾರಿಮಧ್ಯೆ ದಿಢೀರ್ ಅಸ್ವಸ್ಥಗೊಂಡ ಶಹನ್‌ಬಾಚ್ ರಕ್ತವಾಂತಿ ಮಾಡಿ ಪ್ರಜ್ಞೆ ಕಳೆದುಕೊಂಡಿದ್ದರು. ರೈಲು ಕಾಸರಗೋಡು ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೇ ಭದ್ರತಾ ಪಡೆಯು ಅವರನ್ನು ತಕ್ಷಣವೇ ಜನರಲ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

​ಮೃತದೇಹವನ್ನು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಹುಟ್ಟೂರಿಗೆ ಸಾಗಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!