‘ವಂದೇ ಮಾತರಂ’ 150ನೇ ವರ್ಷಾಚರಣೆ ವಿಚಾರಗೋಷ್ಠಿಗೆ ಭಾರಿ ವಿರೋಧ: ಕಾಸರಗೋಡು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

​ಕಾಸರಗೋಡು : ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದ್ವಿದಿನ ರಾಷ್ಟ್ರೀಯ ವಿಚಾರಗೋಷ್ಠಿಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಜ್ಞಾಪ್ರವಾಹ್ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರ ಆಗಮನವನ್ನು ವಿರೋಧಿಸಿ ಎ ಬಿ ವಿ ಪಿ ಹೊರತು ಪಡೆಸಿ ಉಳಿದ ಎಲ್ಲಾ ಸಂಘಟನೆಗಳ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದರು.

​ಅತಿಥಿಗಳಿಗೆ ಪ್ರವೇಶ ನಿಷೇಧಿಸಿ ವಿದ್ಯಾರ್ಥಿಗಳು ಘೋಷಣೆ ಕೂಗಿದಾಗ, ತಡೆದ ಪೊಲೀಸರೊಂದಿಗೆ ನೂಕುನುಗ್ಗಲು ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆಯ ನಡುವೆಯೂ ನಂದಕುಮಾರ್ ವಿ.ವಿ. ಪ್ರವೇಶಿಸಿದರು. ಬುಧವಾರದ ಸಮಾರೋಪಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಆಗಮಿಸುತ್ತಿರುವುದರಿಂದ, ಸ್ಥಳದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಎಬಿವಿಪಿ ಹೊರತುಪಡಿಸಿ ಉಳಿದೆಲ್ಲಾ ವಿದ್ಯಾರ್ಥಿ ಸಂಘಟನೆಗಳು ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಬಹಿಷ್ಕರಿಸಿವೆ.

SHARE
Loading spinner

3 thoughts on “‘ವಂದೇ ಮಾತರಂ’ 150ನೇ ವರ್ಷಾಚರಣೆ ವಿಚಾರಗೋಷ್ಠಿಗೆ ಭಾರಿ ವಿರೋಧ: ಕಾಸರಗೋಡು ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ”

  1. Really impressed with the game variety here. Everything loads quickly and the customer support is actually helpful. Definitely giving vnxd88 another go tomorrow.

    Loading spinner

Leave a Reply

Your email address will not be published. Required fields are marked *

error: Content is protected !!