ಮಂಗಳೂರು: ರೈಲ್ವೆ ಕಾಲನಿ ಶ್ರೀ ಮುತ್ತಪ್ಪನ್ ಕ್ಷೇತ್ರದ ವತಿಯಿಂದ ಪುತ್ತರಿ ಉತ್ಸವ ಅ.31 ಮತ್ತು ನ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ.31ರಂದು ಬೆಳಗ್ಗೆ 6ಕ್ಕೆ ಗಣಹೋಮ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ಶ್ರೀ ಮುತ್ತಪ್ಪನ್ ದೈವದ ಮಲೆಯಿರಕ್ಕಲ್ ನೆರವೇರಲಿದೆ. ಸಂಜೆ 5ರಿಂದ ಶ್ರೀ ಗುಳಿಗನ್ ವೆಳ್ಳಾಟಂ (ಕೋಲ), ಸಂಜೆ 6ರಿಂದ ಶ್ರೀ ಮುತ್ತಪ್ಪನ್ ವೆಳ್ಳಾಟಂ (ಕೋಲ) ನಡೆಯಲಿದೆ. ರಾತ್ರಿ 8ಕ್ಕೆ ಅನ್ನದಾನ, 10ಕ್ಕೆ ಕಳಿಕ್ಕಾಪಾಟ್ ಹಾಗೂ ಮಧ್ಯರಾತ್ರಿ 12ಕ್ಕೆ ಕಲಶ ಪ್ರವೇಶ ನಡೆಯಲಿದೆ.

ನ.1ರಂದು ಬೆಳಗ್ಗೆ 5.30ಕ್ಕೆ ಶ್ರೀ ಮುತ್ತಪ್ಪನ್ ತಿರುವಪ್ಪನ ಕೋಲ ನಡೆಯಲಿದ್ದು, ಬೆಳಗ್ಗೆ 11ಕ್ಕೆ ತಿರುಮುಡಿ ಆಯಿಕ್ಕಲ್ ಮೂಲಕ ಉತ್ಸವ ಸಮಾಪನಗೊಳ್ಳಲಿದೆ.
ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮುತ್ತಪ್ಪನ್ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.

