ಕಾಸರಗೋಡು : ರಬ್ಬರ್ ಟ್ಯಾಪಿಂಗ್‌ಗೆ ಸಂಬಂಧಿಸಿದ ಪೂರ್ವದ್ವೇಷ ಹಾಗೂ ಕ್ಷುಲ್ಲಕ ತರ್ಕ ವಿಕೋಪಕ್ಕೆ ತಿರುಗಿ ಯುವಕನೊಬ್ಬನನ್ನು ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.ತೃಶೂರಿನ ವಿಜಯನ್ (44) ಗಾಯಗೊಂಡ ವ್ಯಕ್ತಿಯಾಗಿದ್ದು, ಎಣ್ಮಕಜೆ ಬೇಂಗಪದವಿನ ಅಜಿ ಕುಮಾರ್ (43) ಬಂಧಿತ ಆರೋಪಿ.

ಸೋಮವಾರ ರಾತ್ರಿ ನಡೆದ ಗಲಾಟೆಯಲ್ಲಿ ಅಜಿ ಕುಮಾರ್ ಚಾಕು ಹಾಗೂ ಕಬ್ಬಿಣದ ಸರಳಿನಿಂದ ವಿಜಯನ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಕೈಗೆ ಇರಿತ ಬಿದ್ದಾಗ ವಿಜಯನ್ ಕುತ್ತಿಗೆಗೆ ಬೀಳಲಿದ್ದ ಮತ್ತೊಂದು ಇರಿತದಿಂದ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ವಿಜಯನ್ ಚಿಕಿತ್ಸೆ ಪಡೆಯುತ್ತಿದ್ದು, ಬದಿಯಡ್ಕ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

