ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಣ್ಣಂಗುಝಿಯಲ್ಲಿ ಅಜ್ಞಾತ ಪ್ರಾಣಿಯೊಂದು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.ಮಗಳು ಮದ್ರಸಕ್ಕೆ ತೆರಳುತ್ತಿದ್ದ ವೇಳೆ ರಸ್ತೆಗೆ ಅಡ್ಡವಾಗಿ ಓಡಿ ಕಾಡಿನತ್ತ ತೆರಳಿದ ಪ್ರಾಣಿಯನ್ನು ಕರವೂರಿನ ರಫೀಕ್ ಎಂಬವರು ಕಂಡು, ಅದು ಚಿರತೆಯಂತಿದೆ ಎಂದು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಗ್ಗೆ ನಡೆದ ಈ ಘಟನೆಯ ನಂತರ ಸ್ಥಳೀಯರು ಹುಡುಕಾಟ ನಡೆಸಿದರೂ ಪ್ರಾಣಿ ಪತ್ತೆಯಾಗಿಲ್ಲ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು, ಕಂಡುಬಂದ ಪ್ರಾಣಿ ಚಿರತೆಯಾಗಿರಲು ಸಾಧ್ಯತೆ ಕಡಿಮೆ ಎಂದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಜಾಗ್ರತೆಯಿಂದ ಇರುವಂತೆ ಸೂಚಿಸಿದ್ದಾರೆ.ಅರಣ್ಯಾಧಿಕಾರಿಗಳ ಸ್ಪಷ್ಟನೆ ಹೊರತಾಗಿಯೂ ಗ್ರಾಮಸ್ಥರಲ್ಲಿ ಆತಂಕ ಮುಂದುವರಿದಿದೆ.



Trang web rất uy tín và dễ sử dụng. Tôi rất thích cách họ hỗ trợ khách hàng tận tình. Mọi người nên thử trải nghiệm tại vnshbbet