ಫಿಜಾ ಬೈ ನೆಕ್ಸಸ್‌ನಲ್ಲಿ ಇಂದಿನಿಂದ ದಸರಾ ನವೋತ್ಸವ ಸೀಸನ್–04

ಮಂಗಳೂರು: ಕರಾವಳಿಯ ಪ್ರಮುಖ ಶಾಪಿಂಗ್ ತಾಣ ಫಿಜಾ ಬೈ ನೆಕ್ಸಸ್‌ನಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ. ದಸರಾ ನವೋತ್ಸವ ಸೀಸನ್–04 ಸಾಂಸ್ಕೃತಿಕ ಉತ್ಸವ ಅಕ್ಟೋಬರ್ 11ರಿಂದ 20ರವರೆಗೆ ಹತ್ತು ದಿನಗಳ ಕಾಲ ನಡೆಯಲಿದ್ದು, ಇಂದಿನಿಂದ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.

ದಸರಾ ಹಬ್ಬದ ಸಡಗರವನ್ನು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿರುವ ಈ ಉತ್ಸವದಲ್ಲಿ ತುಳು ಸಂಗೀತ, ಶಾಸ್ತ್ರೀಯ ನೃತ್ಯ, ಹಾಸ್ಯ ನಾಟಕ, ಜಾನಪದ ಕಲೆ ಸೇರಿದಂತೆ ಕರಾವಳಿ ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕುಟುಂಬ ಸಮೇತ ಆಗಮಿಸುವ ಗ್ರಾಹಕರು ಹಾಗೂ ಸಂದರ್ಶಕರಿಗೆ ಹಬ್ಬದ ವಿಶೇಷ ಅನುಭವ ನೀಡುವ ನಿಟ್ಟಿನಲ್ಲಿ ಮಾಲ್‌ ಅನ್ನು ಆಕರ್ಷಕ ದಸರಾ ಥೀಮ್‌ನ ವರ್ಣರಂಜಿತ ಅಲಂಕಾರಗಳಿಂದ ಸಿಂಗರಿಸಲಾಗಿದೆ.

ಅ.11ರಂದು ರಾತ್ರಿ 9 ಗಂಟೆಯಿಂದ ತುಳು ಮ್ಯೂಸಿಕ್ ನೈಟ್‌ನೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅ.12ರಂದು ಸಂಜೆ 5 ಗಂಟೆಗೆ ‘ಕಥೆ ಎಡ್ಡೆ ಉಂಡು’ ತುಳು ನಾಟಕ, ಅ.13ರಂದು ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನೃತ್ಯ ವೈಭವ, ಅ.14ರಂದು ರೆಮೋನಾ ಮತ್ತು ತಂಡದಿಂದ ಭರತನಾಟ್ಯ ಜುಗಲ್‌ಬಂದಿ ನಡೆಯಲಿದೆ.

ಅ.15ರಂದು ಮಧ್ಯಾಹ್ನ 2 ಗಂಟೆಯಿಂದ ಕಿನ್ನಿ ಪಿಲಿ ವೇಷ, ಅ.16ರಂದು ಸಂಜೆ 5 ಗಂಟೆಗೆ ‘ತಾಲ್ ತರಂಗ್’, ಅ.17ರಂದು ಸಂಜೆ 5 ಗಂಟೆಗೆ ‘ಯಾನೊರಿ ಬರೋಲಿಯಾ’ ತುಳು ಹಾಸ್ಯ ನಾಟಕ, ಅ.18ರಂದು ಸಂಜೆ 5 ಗಂಟೆಗೆ ‘ಶಾರದಾ ಕಲಾ ಸೌರಭ’ ಕಾರ್ಯಕ್ರಮಗಳು ಜರುಗಲಿವೆ.

ಅ.19ರಂದು ಮಧ್ಯಾಹ್ನ 2 ಗಂಟೆಯಿಂದ ಪುಟಾಣಿ ಮಕ್ಕಳಿಗಾಗಿ ‘ಎಂಚಿ ವೇಷ’ ಹಬ್ಬದ ವೇಷಭೂಷಣ ಸ್ಪರ್ಧೆ ಹಾಗೂ ಅ.20ರಂದು ಮಧ್ಯಾಹ್ನ 2 ಗಂಟೆಯಿಂದ ‘ಪಿಲಿ ನಲಿಕೆ’ ಹುಲಿವೇಷ ನೃತ್ಯ ಪ್ರದರ್ಶನ ನಡೆಯಲಿದೆ.

ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಮಾಲ್‌ನಾದ್ಯಂತ ವಿಶೇಷ ಅಲಂಕಾರಗಳನ್ನು ಮಾಡಲಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ಹಾಗೂ ಸ್ಮರಣೀಯ ಚಿತ್ರಗಳನ್ನು ಸೆರೆಹಿಡಿಯಲು ಸುಂದರ ವಾತಾವರಣ ಕಲ್ಪಿಸಲಾಗಿದೆ.

ಫಿಜಾ ಬೈ ನೆಕ್ಸಸ್, ಮಂಗಳೂರಿನಲ್ಲಿ ನಡೆಯಲಿರುವ ದಸರಾ ನವೋತ್ಸವ ಸೀಸನ್–04ಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಅಕ್ಟೋಬರ್ 11ರಿಂದ 20ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!