ಮಂಜೇಶ್ವರ : ಇಲ್ಲಿಗೆ ಸಮೀಪದ ಜೋಡುಕಲ್ಲು ಪ್ರದೇಶದಲ್ಲಿ ಸಾರ್ವಜನಿಕ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಸಭಾಂಗಣ ಮಾದರಿಯ ಚಪ್ಪರ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಮುಸ್ಲಿಂ ಲೀಗ್ ಕಾರ್ಯಕರ್ತರೊಬ್ಬರ ದೂರಿನ ಮೇರೆಗೆ ಕೋರ್ಟ್ ಈ ಆದೇಶ ಹೊರಡಿಸಿದ್ದು, ಇಂದು ಅಧಿಕಾರಿಗಳು ತೆರವಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಹಬ್ಬಿತ್ತು.

ಇದನ್ನು ವಿರೋಧಿಸಲು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಭಕ್ತರು ಮುಂಜಾನೆಯಿಂದಲೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮಂಜೇಶ್ವರ ಎಸ್.ಐ. ನೇತೃತ್ವದಲ್ಲಿ ಸ್ಥಳದಲ್ಲಿ ವ್ಯಾಪಕ ಪೊಲೀಸ್ ಸರ್ಪಗಾವಲು ಮತ್ತು ಭದ್ರತೆಯನ್ನು ನಿಯೋಜಿಸಲಾಗಿದೆ.
ಪ್ರಸ್ತುತ ‘ಆರಾಧನಾ ಭೂಮಿ ಸಂರಕ್ಷಣಾ ಕ್ರಿಯಾ ಸಮಿತಿ’ಯ ನೇತೃತ್ವದಲ್ಲಿ ಶ್ರೀರಾಮನಾಮ ತಾರಕ ಯಜ್ಞ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಸ್ಥಳ ಕಬಳಿಕೆಗಾಗಿ ಅಲ್ಲದೆ ಧಾರ್ಮಿಕ ಆಚರಣೆಗೆ ಮಾತ್ರ ಇದು ಸೀಮಿತವಾಗಿದ್ದು, ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಲು ಸಮಿತಿ ನಿರ್ಧರಿಸಿದೆ.


