ಹೈದರಾಬಾದ್ :ಚಿಕಿತ್ಸೆಗೆಂದು ಬಂದ ಮಾನಸಿಕ ಅಸ್ವಸ್ಥನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋ ವೈದ್ಯರೊಬ್ಬರು ಕಡೆಗೆ ಆತನ ಕಿರುಕುಲವನ್ನೇ ತಡೆದುಕೊಳ್ಳಲ್ಲು ಆಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಹೈದರ್ ಬಾದ್ ನಲ್ಲಿ ನಡೆದಿದೆ . ಮೃತಳನ್ನು ಜೆ ಕೆ ಕಾಲೋನಿಯ 33 ಹರೆಯದ ರಜಿತಾ ಎಂದು ಗುರುತಿಸಲಾಗಿದೆ .
ರಜಿತಾ ಮನೋ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ವ್ಯಾಸಂಗ ಮಾಡುವಾಗ ರೋಹಿತ್ ನನ್ನ ಭೇಟಿಯಾಗಿದ್ದರು . ಬಂಜಾರ್ ಹಿಲ್ಸ್ ಮಾನಸಿಕ ಆಸ್ಪತ್ರೆಯಲ್ಲಿ ಇಂಟರ್ಶಿಪ್ ಮಾಡುವಾಗ ರೋಹಿತ್ ಅಲ್ಲಿಗೆ ರೋಗಿಯಾಗಿ ಬಂದಿದ್ದರು . ಆಕೆಯೇ ಆತನಿಗಿಗೆ ಕೌಂಸಿಲಿನ್ ನಡೆಸಿದ್ದಳು .
ನಂತರ ಸಹಜ ಸ್ಥಿತಿಗೆ ಬಂದಿದ್ದ ಈ ಸಮಯದಲ್ಲಿ ಆತನ ಮೇಲೆ ಒಲವು ಮೂಡಿತ್ತು . ಬಳಿಕ ಇಬ್ಬರು ವಿವಾಹವಾದರು . ಈ ನಡುವೆ ರೋಹಿತ್ ಆಕೆ ದುಡಿತ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದನು . ಇದನ್ನು ಪ್ರಶ್ನೆ ಮಾಡಿದ ಆಕೆಯ ಮೇಲೆ ದೈಹಿಕ ಹಲ್ಲೆಯನ್ನು ಮಾಡುತ್ತಿದ್ದ . ಇದರಿಂದ ಬೇಸೆತ್ತಿದ್ದ ಯುವತಿ ಈ ಹಿಂದೆ ಆತ್ಮಹತ್ಯೆಗೆ ಯತ್ನ ಮಾಡಿದ್ದಳು .ಆದರೆ ಆಕೆಯನ್ನು ರಕ್ಷಿಸಿದ್ದರು .
ಆದರೆ ಈ ಭಾರಿ ತನ್ನ ತಂದೆಯ ಮನೆಗೆ ತೆರಳಿ 4 ನೇ ಮಹಡಿಯ ಸ್ನಾನ ಗೃಹದ ಕಿಟಿಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾಳೆ . ಈ ಪ್ರಕರಣಕ್ಕೆ ಸಂಬಂಧಿಸಿ ಸಂಜೀವ ನಗರ ರೆಡ್ಡಿ ಪೊಲೀಸರು ಪ್ರಕರಣವನ್ನು ಧಾಖಲಿಸಿದ್ದಾರೆ .