ಮಂಜೇಶ್ವರ : ಕುಂಜತ್ತೂರು ಅಲ್ ಮದ್ರಸತುಲ್ ಇಸ್ಲಾಹಿಯಾದಲ್ಲಿ ‘ಮದ್ರಸ ಸರ್ಗಮೇಳ’ ಸಮಾರೋಪ: ಪುಟಾಣಿಗಳ ಪ್ರತಿಭೆಗೆ ಸಾಕ್ಷಿಯಾದ ಮನೋಜ್ಞ ವೇದಿಕೆ

ಮಂಜೇಶ್ವರ: ಕೆ.ಎನ್.ಎಮ್ ಎಜುಕೇಶನ್ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಅಲ್ ಮದ್ರಸತುಲ್ ಇಸ್ಲಾಹಿಯಾದ ಆಶ್ರಯದಲ್ಲಿ ಸಂಘಟಿಸಲಾದ ‘ಮದ್ರಸ ಸರ್ಗಮೇಳ’ವು ವಿಜೃಂಭಣೆಯ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.

ಪುಟಾಣಿ ವಿದ್ಯಾರ್ಥಿಗಳ ವಿಶೇಷ ನೈಪುಣ್ಯತೆ ಮತ್ತು ಸೃಜನಶೀಲ ಪ್ರತಿಭೆಗಳನ್ನು ಪೂರ್ಣಪ್ರಮಾಣದಲ್ಲಿ ಅನಾವರಣಗೊಳಿಸಲು ಈ ಸರ್ಗಮೇಳವು ಅತ್ಯುತ್ತಮ ವೇದಿಕೆಯಾಗಿ ಮೂಡಿಬಂತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಮಸೀದಿ ಅಧ್ಯಕ್ಷರಾ ಹಾಜಿ ಅಬ್ದುರ್ರಹ್ಮಾನ್ ಅರಿಮಲ ಅಧಿಕೃತವಾಗಿ ಉದ್ಘಾಟಿಸಿದರು.

“ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತಂದು, ಸಮಾಜದ ಮುಂಭಾಗದಲ್ಲಿ ಅವರನ್ನು ಗುರುತಿಸುವಂತೆ ಮಾಡಲು ಇಂತಹ ವೇದಿಕೆಗಳು ತುಂಬಾ ಸಹಕಾರಿಯಾಗಿವೆ. ವಿದ್ಯಾರ್ಥಿಗಳ ಈ ಸೃಜನಶೀಲ ಪ್ರಗತಿಗೆ ಸಮಾಜದಿಂದ ನಿರಂತರವಾಗಿ ಉತ್ತಮ ಬೆಂಬಲ ದೊರೆಯುತ್ತಿರುವುದು ಸಂತಸದ ವಿಷಯ” ಎಂದು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಅಭಿಪ್ರಾಯಪಟ್ಟರು.

ಶೈಕ್ಷಣಿಕ ಮಟ್ಟ ಹಾಗೂ ಅತ್ಯುತ್ತಮ ಹಾಜರಾತಿಯನ್ನು ಕಾಯ್ದುಕೊಂಡ ವಿದ್ಯಾರ್ಥಿಗಳನ್ನು, ಹಾಗೂ ಸರ್ಗಮೇಳದ ಅಂಗವಾಗಿ ನಡೆದ ಭಾಷಣ, ಗಾಯನ, ಸಂಭಾಷಣೆ-ಹಾಡು ಮತ್ತು ಕಥೆ ಹೇಳುವಿಕೆ ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಾಲಪ್ರತಿಭೆಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.

ಪ್ರತಿಯೊಂದು ವಿಭಾಗದ ಪ್ರದರ್ಶನಗಳೂ ಮಕ್ಕಳ ಕಲಾತ್ಮಕ ಮತ್ತು ಶೈಕ್ಷಣಿಕ ಪ್ರತಿಭೆಯನ್ನು ಎತ್ತಿಹಿಡಿಯುವಂತಿದ್ದವು.

ಸಮಾರಂಭದಲ್ಲಿ ಮಹಮ್ಮದ್ ಹಾಜಿ, ನವಾಝ್ ಮದನಿ, ರಿಯಾಝ್, ಬಶೀರ್, ಅಬ್ದುರ್ರಹ್ಮಾನ್, ಶರೀಫ್, ಬಾವುಂಞ, ಅಸ್ಲಂ, ಹಮೀದ್, ಮುಸ್ತಫಾ ಸೇರಿದಂತೆ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದು ವಿಜೇತರಿಗೆ ಶುಭ ಹಾರೈಸಿದರು.

ಮದ್ರಸ ಸದರ್ ಮುದರ್ರಿಸ್ ಮುಹಮ್ಮದ್ ಅಲಿ ಸಲಫಿ ಸ್ವಾಗತಿಸಿ ನವಾಝ್ ಮದನಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!