ಹೊಸಂಗಡಿ: ಡಿಸೆಂಬರ್ 1 ಮತ್ತು 2ರಂದು ನಡೆಯಲಿರುವ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧದ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದ ಅಂಗವಾಗಿ CITU ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಹಮ್ಮಿಕೊಂಡ ವಾಹನ ಪ್ರಚಾರ ಜಾಥಾಕ್ಕೆ ಹೊಸಂಗಡಿಯಲ್ಲಿ ಚಾಲನೆ ನೀಡಲಾಯಿತು.


CITU ರಾಜ್ಯ ಉಪಾಧ್ಯಕ್ಷ ಟಿ.ಕೆ. ರಾಜನ್ ಅವರು CITU ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿ ಮೋಹನ್ ಅವರಿಗೆ CITU ಧ್ವಜ ಹಸ್ತಾಂತರಿಸುವ ಮೂಲಕ ಜಾಥಾವನ್ನು ಉದ್ಘಾಟಿಸಿದರು.


ಡಿ. ಕಮಲಾಕ್ಷ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ.ಪಿ.ಪಿ. ಮುಸ್ತಫಾ, ಶೋಭಾ ಬಿ., ಪಿ.ಎ. ಅಬ್ದುಲ್ ರಹಿಮಾನ್, ಟಿ. ನಾರಾಯಣನ್ ಎ.ಆರ್. ಧನ್ಯವಾದ ಇಬ್ರಾಹಿಂ ಪುತ್ತಿಗೆ ಹಾಗೂ ಕರ್ಷಕ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉಪಸ್ಥಿತರಿದ್ದರು.ಪ್ರಶಾಂತ್ ಕನಿಲ ಸ್ವಾಗತಿಸಿದರು

