​ ಎಸ್ ಎ ಟಿ ಶಾಲೆಯಲ್ಲಿ ಯು.ಪಿ. ವಿಭಾಗದ ಕಂಪ್ಯೂಟರ್ ಲ್ಯಾಬ್ ಹಾಗೂ ರಕ್ಷಕ-ಶಿಕ್ಷಕ ಸಂಘದ ಕೊಠಡಿ ಉದ್ಘಾಟನೆ

​

ಮಂಜೇಶ್ವರ: ಇಲ್ಲಿನ ಎಸ್ ಎ ಟಿ ಶಾಲೆಗಳ ಯು.ಪಿ. ವಿಭಾಗದ ನೂತನ ಕಂಪ್ಯೂಟರ್ ಲ್ಯಾಬ್ ಮತ್ತು ರಕ್ಷಕ-ಶಿಕ್ಷಕ ಸಂಘದ ಕೊಠಡಿಯ ಉದ್ಘಾಟನಾ ಸಮಾರಂಭವು ಬಹಳ ಅದ್ದೂರಿಯಾಗಿ ನೆರವೇರಿತು.

​ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಮತ್ ಅನಂತೇಶ್ವರ ದೇವಳದ ಅಧ್ಯಕ್ಷರಾದ ಟಿ. ಗಣಪತಿ ಪೈ ಅವರು ನೂತನ ಕಂಪ್ಯೂಟರ್ ಲ್ಯಾಬ್ ಹಾಗೂ ರಕ್ಷಕ-ಶಿಕ್ಷಕ ಸಂಘದ ಕೊಠಡಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬೆಂಗಳೂರಿನ ಆಭರಣ ಜುವೆಲ್ಲರಿಯ ಮಾಲಕ ಡಾ. ಪ್ರತಾಪ್ ಮಧುಕರ್ ಕಾಮತ್ ಮತ್ತು ಕುಟುಂಬದವರು ಈ ಲ್ಯಾಬ್‌ಗೆ ಅಗತ್ಯವಿರುವ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಶಾಲಾ ಪ್ರಬಂಧಕರಾದ ಪ್ರಶಾಂತ್ ಹೆಗ್ಡೆ ಅವರು ಕಂಪ್ಯೂಟರ್‌ಗಳಿಗೆ ಚಾಲನೆ ನೀಡಿದರು.

​ಈ ಸಂದರ್ಭ ದೇವಳದ ಉಪಾಧ್ಯಕ್ಷ ಹಾಗೂ ಶಾಲಾ ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ, ಶಾಲಾ ಮೇಲ್ವಿಚಾರಕಿ ರಮಾಬಾಯಿ ಟೀಚರ್, ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲೆ ಸುಮನ ಐಲ್, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ತೇಜೇಶ್ ಕಿರಣ್, ಹೈಯರ್ ಸೆಕೆಂಡರಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸಿ. ಇಬ್ರಾಹಿಂ, ಉಪಾಧ್ಯಕ್ಷೆ ಆಯಿಷಾ, ಸಮಿತಿಯ ಸದಸ್ಯರು ಹಾಗೂ ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

​ಶಿಕ್ಷಕಿ ನವ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!