ಪಚ್ಚಂಪಳ ಮಖಾಂನಲ್ಲಿ ಜನಸಾಗರ: ಅದ್ಧೂರಿಯಾಗಿ ಸಂಪನ್ನಗೊಂಡ ಉರೂಸ್

ಇಚ್ಚಿಲಂಗೋಡು :ಇಚ್ಚಿಲಂಗೋಡು ಪಚ್ಚಂಪಳ ಮಖಾಂನಲ್ಲಿ 14 ದಿನಗಳ ಕಾಲ ನಡೆದ ಧಾರ್ಮಿಕ ಪ್ರವಚನ ಹಾಗೂ ಉರೂಸ್ ಕಾರ್ಯಕ್ರಮವು ಸಾವಿರಾರು ಭಕ್ತರಿಗೆ ಅನ್ನದಾನ ನೀಡುವ ಮೂಲಕ ಸಮಾಪನಗೊಂಡಿತು.

ಬೆಳಿಗ್ಗೆ 9 ಗಂಟೆಗೆ ಮೌಲೂದ್ ಪಾರಾಯಣ ಆರಂಭಗೊಂಡಿದ್ದು, ಇಚಿಲಂಕೋಡು ಜುಮಾ ಮಸೀದಿಯ ಖತೀಬ್ ಅಶ್ರಫ್ ಬುಸ್ತಾನಿ ನೇತೃತ್ವ ವಹಿಸಿದ್ದರು. ಬಳಿಕ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಅನ್ನದಾನ ಕಾರ್ಯಕ್ರಮ ಸಂಜೆ 5 ಗಂಟೆಯವರೆಗೆ ನಡೆಯಿತು.

14 ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿದಿನ ನೂರಾರು ಮಂದಿ ಭಾಗವಹಿಸಿದ್ದರು. ಜಾತಿ-ಮತ ಭೇದವಿಲ್ಲದೆ ವಿವಿಧ ಸಮುದಾಯಗಳ ಜನರು ಆಗಮಿಸಿದ್ದರಿಂದ ಪಚ್ಚಂಪಳ ಮಖಾಂ ಪರಿಸರ ಜನಸಾಗರವಾಗಿ ಮಾರ್ಪಟ್ಟಿತ್ತು.

ಸಾವಿರಾರು ಜನರ ಭಾಗವಹಿಸುವಿಕೆಯೊಂದಿಗೆ ಉರೂಸ್ ಕಾರ್ಯಕ್ರಮವು ಭಕ್ತಿಭಾವದಿಂದ ಸಂಪನ್ನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!