ಇಚ್ಚಿಲಂಗೋಡು ಪಚ್ಚಂಬಳಂ ಮಖಾಂ ಉರೂಸ್ ಸಮಾರೋಪ ಇಂದು: ಸಾವಿರಾರು ಭಕ್ತರ ಆಗಮನ ನಿರೀಕ್ಷೆ

ಐತಿಹಾಸಿಕ ಪ್ರಸಿದ್ಧ ಇಚ್ಚಿಲಂಗೋಡು ಪಚ್ಚಂಬಳಂ ಮಖಾಂ ಉರೂಸ್ ಸಮಾರೋಪ ಸಮಾವೇಶ ಇಂದು ರಾತ್ರಿ 7.30ಕ್ಕೆ ನಡೆಯಲಿದೆ.

ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಫಿಝ್ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಪೈಯ್ಯನಾಡ್ ಉಸ್ತಾದ್ ದುಆಗೆ ನೇತೃತ್ವ ನೀಡಲಿದ್ದಾರೆ.

ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಯ್ಯಿದ್ ಕೆ.ಎಸ್. ಅಲಿ ತಂಗಳು ಕುಂಬೋಳ್ ಮೌಲಿದ್ ಪಾರಾಯಣಕ್ಕೆ ನೇತೃತ್ವ ನೀಡಲಿದ್ದಾರೆ. ಬಳಿಕ ಸಾವಿರಾರು ಜನರಿಗೆ ಅನ್ನದಾನ ನಡೆಯಲಿದೆ.

ಪಚ್ಚಂಬಳಂ ಮಖಾಂ ಪರಿಸರಕ್ಕೆ ಜಾತಿ-ಧರ್ಮ ಭೇದವಿಲ್ಲದೆ ವಿವಿಧ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ವಿವಿಧ ಸ್ಥಳಗಳಿಂದ ಸುಮಾರು 20 ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಮಖಾಂ ಪರಿಸರಕ್ಕೆ ಆಗಮಿಸುವವರಿಗೆ ಸಹಕಾರ ನೀಡಲು ನೂರಾರು ಸ್ವಯಂಸೇವಕರು ಸೇವೆಯಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!