ರಾಜ್ಯ ಲೈಬ್ರರಿ ಕೌನ್ಸಿಲ್ ಮಾಜಿ ಸದಸ್ಯರಾಗಿ, ಕೆಎಸ್ ಟಿಎ ರಾಜ್ಯ ಸಮಿತಿ ಸದಸ್ಯರಾಗಿ, ಸೇವಾ ಪಿಂಚಣಿದಾರರ ಸಂಘದ ರಾಜ್ಯ ನಾಯಕರಾಗಿ, ತುಳು ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ ಶ್ರೀ ಎಸ್ ನಾರಾಯಣ ಭಟ್ ಅವರನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ವತಿಯಿಂದ ಸಂಸ್ಕರಣೆ ನಡೆಯಿತು.
ಕಾಸರಗೋಡು ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಸ್ಮರಣಾಂಜಲಿ ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಶ್ರೀ ಎನ್. ಎ. ನೆಲ್ಲಿಕುನ್ನು ಅವರು ಶ್ರೀಯುತರ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಅಡ್ವ. ಪಿ ಅಪ್ಪುಕುಟ್ಟನ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಕೆ ಪನೆಯಾಲ್ ಸ್ಮರಣಾರ್ಥ ಭಾಷಣ ಮಾಡಿದರು. ಎ ಕೆ ಶಶಿಧರನ್, ಪಿ ಕೆ ಅಹಮ್ಮದ್ ಹುಸೇನ್, ಎ.ಕರುಣಾಕರನ್ ದಾಸಪ್ಪ ಶೆಟ್ಟಿ, ಶೇಖರ ಶಟ್ಟಿ ಬಾಯಾರ್, ಪಿ.ದಾಮೋದರನ್, ರಾಘವನ್ ವಲಿಯ ವೀಡ್, ಡಿ.ಕಮಲಾಕ್ಷ, ವಿ.ಅಬ್ದುಲ್ಲಾ, ಶ್ರೀಕುಮಾರಿ ಟೀಚರ್ ಮತ್ತಿತರರು ಮಾತನಾಡಿದರು.
ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಪಿ.ದಿಲೀಪ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಧನ್ಯವಾದ ಸಲ್ಲಿಸಿದರು.