ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಮೀಲಾದ್ ಆಚರಣೆ.

ಪುಚ್ಚತ್ತವಯಲ್: ಪ್ರವಾದಿ ಹಜ್ರತ್ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1500ನೇ ಜನ್ಮದಿನಾಚರಣೆ ಅಂಗವಾಗಿ ಹಯಾತುಲ್ ಇಸ್ಲಾಂ ಮದ್ರಸ, ಪುಚ್ಚತ್ತವಯಲ್‌ನಲ್ಲಿ ಭಕ್ತಿಪೂರ್ಣ ಮೀಲಾದ್ ರ‍್ಯಾಲಿ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


ಜಮಾಅತ್ ಖತೀಬ್ ಉಮರುಲ್ ಫಾರೂಖ್ ಹನೀಫಿ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಮದ್ರಸ ವಿದ್ಯಾರ್ಥಿಗಳು ವರ್ಣರಂಜಿತ ಘೋಷಯಾತ್ರೆಯಲ್ಲಿ ಭಾಗವಹಿಸಿದರು. ದಫ್, ಸ್ಕೌಟ್ ಮತ್ತು ಹೂವಿನಿಂದ ಅಲಂಕರಿಸಿದ ಫ್ಲವರ್‌ಶೋಗಳು ಮೀಲಾದ್ ರ‍್ಯಾಲಿಗೆ ಮೆರುಗು ನೀಡಿದವು.


ಮೀಲಾದ್ ರ‍್ಯಾಲಿಯು ಮಚ್ಚಂಬಾಡಿ ಜುಮಾ ಮಸೀದಿಯಿಂದ ಕೋಡಿ ಸಂಸುಲ್ ಉಲಮಾ ನಗರವನ್ನು ಹಾದು, ಪುಚ್ಚತ್ತವಯಲ್ XYZ ಕ್ಲಬ್ ಕಾರ್ಯಕರ್ತರ ಆತ್ಮೀಯ ಸ್ವಾಗತದೊಂದಿಗೆ ಕೊನೆಗೊಂಡಿತು. ನಬಿದಿನ ರ‍್ಯಾಲಿಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಜಮಾಅತ್ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡರು. ಈ ಕಾರ್ಯಕ್ರಮಗಳು ಭಕ್ತಿಭಾವ ಮತ್ತು ಉತ್ಸಾಹದ ವಾತಾವರಣದಲ್ಲಿ ನೆರವೇರಿದವು.

    SHARE
    Loading spinner

    Leave a Reply

    Your email address will not be published. Required fields are marked *

    error: Content is protected !!