ವೈರಲ್ ಆದ ಕಟೀಲಿನ ಪಡಿತರ ಅಂಗಡಿಯ ಗೋಣಿ ಚೀಲ- ಸುದ್ದಿಗೋಷ್ಠಿಯಲ್ಲಿ ಸತೀಶ್ ಕಟೀಲ್ ಸ್ಪಷ್ಟತೆ

ಮಂಗಳೂರು: ಇತ್ತೀಚಿಗೆ ಬಾರಿ ಪ್ರಮಾಣದಲ್ಲಿ ವೈರಲ್ ಆದ ಕಟೀಲಿನ ಪಡಿತರ ಅಂಗಡಿಯ ಗೋಣಿ ಚೀಲದ ಸಮಸ್ಯೆಯನ್ನು ಮತ್ತು ಪಡಿತರ ಅಂಗಡಿಯಲ್ಲಿ ಏನೇನು ನಡೆಯಿತು ಎನ್ನುವುದರ ಕುರಿತು ಸತೀಶ್ ಕಟೀಲ್ ಸ್ಪಷ್ಟತೆ ನೀಡಿದರು .

ಅವರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಟೀಲು ಪಡಿತರ ಅಂಗಡಿಯನ್ನು ಹಲವು ವರ್ಷಗಳಿಂದ ಮಂಜುನಾಥ ನಾಯಕ್ ಎಂಬುವವರು ಕಟೀಲು ಸಮೀಪ ನ್ಯಾಯಬೆಲೆ ಅಂಗಡಿ‌ಮೂಲಕ ಸರಕಾರದಿಂದ ಸಿಗುವ ರೇಷನನ್ನು ನೀಡುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು, ಆದರೆ ಇತ್ತೀಚಿನ ಕೆಲವರ್ಷಗಳಿಂದ ಈ ರೇಷನ್ ಅಂಗಡಿಯಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿದೆ, ಮುಖ್ಯವಾಗಿ ಕಳೆದ ಕೆಲ ದಿನಗಳ ಹಿಂದೆ ನಾನು ನಮ್ಮ ಮನೆಯ ರೇಷನ್ ಅಂದರೆ ಅಕ್ಕಿ ತೆಗೆದುಕೊಳ್ಳಲು ತಾಯಿಯ ಜೊತೆ ಹೋಗಿದ್ದೆ ಆ ಸಂದರ್ಭ ಅಕ್ಕಿ ಜೊತೆ ಒಂದು ಗೋಣಿಯ ಬೆಲೆ 50 ರೂ ಕೊಡಬೇಕು ಎಂದು ದೀಪಾ ನಾಯಕ್ ಹೇಳಿದರು,

ಆ ಸಂದರ್ಭ ನಾನು 50 ರೂ ಕೊಡಲು ತಯಾರಿದ್ದೇನೆ ಆದರೆ ಕಾನೂನಿನಲ್ಲಿ 50 ರೂ ಕೇಳಲು ಅವಕಾಶ ಇದೆಯೇ ಎಂದು ಕೇಳಿದ ತಕ್ಷಣ ದೀಪಾ ನಾಯಕ್ ಅವರು ಏರು ಧ್ವನಿಯಲ್ಲಿ ಬಾರೀ ಕಾನೂನು‌ ಮಾತಾಡ್ತೀಯ ಇನ್ನು ಮಾತಾಡಿದರೆ ನಿನ್ನ ರೇಷನ್ ಕಾರ್ಡ್ ರದ್ದು‌ಮಾಡುತ್ತೇನೆ ಅಂದರು, ಈ ಸಂದರ್ಭ ನಮ್ಮ ಮಧ್ಯೆ ಮಾತಿನ ಚಕಮಕಿ ನಡೆಯಿತು, ಈ ಸಂದರ್ಭ ದೀಪಾ ನಾಯಕ್ ಕೂಡಲೇ ಗೋಣಿಗೆ 20 ರೂ ಕೊಟ್ಟು ತೆಗೆದುಕೊಂಡು ಹೋಗಿ ಅಥವಾ ಮನೆಯಿಂದ ಗೋಣಿ ತನ್ನಿ ಅಂದರು, ಇಲ್ಲಿ ಗಮನಿಸಬಹುದು ಗೋಣಿಗೆ 50 ರೂ ಕೊಡಿ ಎಂದವರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದ ಕೂಡಲೇ ಗೋಣಿಯ ಬೆಲೆ 20 ರೂಪಾಯಿಗೆ ಇಳಿಸಿದರು, ಈ ಬಗ್ಗೆ ಮತ್ತೆ ವಿಚಾರಿಸಿದರೂ ಗೋಣಿ ಚೀಲದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, ಕೂಡಲೇ ನಾನು ಆಹಾರ ಅಧಿಕಾರಿ, ಗ್ರಾಮಕರಣಿಕರು ಮತ್ತಿತರ ಅಧಿಕಾರಿಗಳಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದೆ, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸರಕಾರದ ಆದೇಶದ ಸ್ಪಷ್ಟನೆ ನೀಡಿದರು. ಆನಂತರ ನಮಗೆ ಸರಕಾರ ಆದೇಶ ಸ್ಪಷ್ಟನೆ ನೀಡಿದರು.

ಈ ರೇಷನ್ ಅಂಗಡಿಯಲ್ಲಿ ದೀಪಾ ನಾಯಕ್ ಬಂದ ನಂತರ ದಬ್ಬಾಳಿಕೆ ಹೆಚ್ಚಾಗಿದ್ದು, ಗ್ರಾಹಕರೊಂದಿಗೆ ಮಾತಾಡುವ ಕ್ರಮವೂ ಸರಿಯಾಗಿಲ್ಲ, ಪ್ರಶ್ನೆ ಮಾಡಲು ಹೋದರೆ ಹೆದರಿಸುವುದು, ಗದರಿಸುವುದು, ಮಾತ್ರವಲ್ಲದೆ ಒಬ್ಬ ಪ್ರಭಾವಿ ರಾಜಕಾರಣಿಯ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. 50 kg ಅಥವಾ 100 kg ಅಕ್ಕಿ ಇದ್ದರೆ ಕೆಲವು ಗ್ರಾಹಕರು ಗೋಣಿ ಚೀಲ ತೆಗೆದುಕೊಂಡು ಹೋದರೂ, ಅಂದರೆ ಗ್ರಾಹಕರೇ ಗೋಣಿ ತಂದರೆ ಸರಕಾರದಿಂದ ಅಕ್ಕಿ ಬಂದ ಗೋಣಿಯ ಜೊತೆಗೆ ಅಕ್ಕಿಯ ಮೂಟೆಯನ್ನೇ ತೆಗೆಕೊಂಡು ಹೋಗಬೇಕು ಎಂದು ಹೇಳುತ್ತಾರೆ, ಗೋಣಿಗೆ 50 ರೂ ಹೆಚ್ಚಿಗೆ ಹಣ ತೆಗೆದುಕೊಳ್ಳುತ್ತಾರೆ, ಒಂದು 50 kg ಮೂಟೆಯಲ್ಲಿ ಕೆಲವೊಂದು ಸಂದರ್ಭ 47 ಅಥವಾ 48 kg ಇರುತ್ತದೆ ಅಂದರೆ ಆ ಗೋಣಿಯಿಂದ ಅಕ್ಕಿಯನ್ನು ಎಗರಿಸಿರುತ್ತಾರೆ.

ಈ ರೇಷನ್ ಅಂಗಡಿಯಲ್ಲಿ ದೀಪಾ ನಾಯಕ್ ಬಂದ ಮೇಲೆ ಅವ್ಯವಹಾರ ನಡೆಯುತ್ತಿದೆ, ಈ ನ್ಯಾಯಬೆಲೆ ಅಂಗಡಿಯಲ್ಲಿ ದಿನಬಳಕೆಯ ಎಲ್ಲ ದಿನಸಿ ಸಾಮಾನುಗಳನ್ನು ಮಾರಾಟ ಮಾಡುತ್ತಾರೆ, ಸರಕಾರದಿಂದ ಬರುವ ಅಕ್ಕಿಯನ್ನು ನಮಗೆ ಕೊಟ್ಟರೆ ನಿಮಗೆ ಬೇರೆ ದಿನಸಿ‌ ಸಾಮಾನುಗಳನ್ನು ನೀಡಲಾಗುವುದು ಎಂದು ಗ್ರಾಹಕರಿಗೆ ಅಮಿಷ ಒಡ್ಡಿ ಅಕ್ಕಿಯನ್ನು ಖರೀದಿಸಿ ಅವರಿಗೆ ದಿನಸಿ ನೀಡುವುದು ಮಾಮೂಲಾಗಿದೆ,

ಅಲ್ಲದೆ ಬಜ್ಪೆ ಕಟೀಲು ರಾಜ್ಯ ಹೆದ್ದಾರಿಯ ಬದಿಯಲ್ಲೇ ಮಾತ್ರವಲ್ಲದೆ ಮೂರು ಮಾರ್ಗಗಳು ಸೇರುವ ಜಾಗದಲ್ಲಿಯೇ ಈ ಅಂಗಡಿ ಇದ್ದು ಅತ್ಯಂತ ಅಪಾಯಕಾರಿಯಾಗಿದೆ, ಕಳೆದ ವರ್ಷ ರೇಷನ್ ಖರೀದಿಸಲು ಬಂದ ಆಟೋ ರಿಕ್ಷಾಕ್ಕೆ ಬಸ್ಸು ಡಿಕ್ಕಿ ಹೊಡೆದು ಸಮಸ್ಯೆಯಾಗಿದ್ದು ಈ ಬಗ್ಗೆ ಸಂಬಂದಪಟ್ಟವರಿಗೆ ದೂರು ನೀಡಿದ್ದು ಈ ಅಂಗಡಿಯನ್ನು ಇಲ್ಲಿಂದ ಸ್ಥಳಾಂತರಿಸುವಂತೆ ಕೇಳಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ ದಬ್ಬಾಳಿಕೆ‌ ಮತ್ತು ಅವ್ಯವಹಾರದ ತಾಣವಾಗಿರುವ ಈ ನ್ಯಾಯಬೆಲೆ ಅಂಗಡಿ ಬಗ್ಗೆ ಸರಕಾರ ಗಮನಹರಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು . ಅದಲ್ಲದೆ ಕಾಳ ಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ . ಬೆಳ್ಳಂಬೆಳಗ್ಗೆ ೪ ಗಂಟೆಯ ಸುಮಾರಿಗೆ ಲೋಡ್ ಲೋಡ್ ಅಕ್ಕಿ ಇಲ್ಲಿಂದ ಬೇರೆ ಕಡೆಗೆ ಸಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಈ ರೇಷನ್ ಶಾಪ್ ನಲ್ಲಿ ಸಿ ಸಿ ಟಿ ವಿ ಯನ್ನು ಇದುವರೆಗೂ ಹಾಕಿಲ್ಲ ಯಾಕೆಂದರೆ ಅವ್ಯವಹಾರದ ತಾಣವಾಗಿರುವ ಆ ನ್ಯಾಯಬೆಲೆ ಅಂಗಡಿಯ ಅನ್ಯಾಯ ಹೊರ ಬರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ದೇವಕಿ, ಮೀನಾಕ್ಷಿ , ವಿಜಯ್ ಕೊಂಡೇಲ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!