ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಓಣಂ ಆಚರಣೆ.

ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ನಮ್ಮ ಸಮಾಜದ ಮಹಿಳೆಯರು ಕೂಡ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಬೇಕು: ಭಾಗೀರಥಿ ರಾಮ ಚಕ್ಕಿಗುಡ್ಡೆ , ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಓಣಂ ಆಚರಣೆ :

ಬಾಕುಡ ಸಮಾಜ ಮಹಿಳಾ ಸಮಿತಿ ಹಾಗು ಬಾಕುಡ ಸಮಾಜ ಕೇಂದ್ರ ಸಮಿತಿಯ ಸಹಯೋಗದೊಂದಿಗೆ ವಾಮಂಜೂರು ಶಾಲೆಯಲ್ಲಿ ಓಣಂ ಆಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಶ್ರೀಮತಿ ಭಾಗೀರಥಿ ರಾಮ ಚಕ್ಕಿಗುಡ್ಡೆ ಉದ್ಘಾಟಿಸಿದರು.

ಇಡೀ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ ನಮ್ಮ ಸಮಾಜದ ಮಹಿಳೆಯರು ಕೂಡ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಉದ್ಘಾಟನಾ ಭಾಷಣದಲ್ಲಿ ಕರೆ ನೀಡಿದರು. ಸಭಾ ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿದ ಬಾರ್ಗಿನಿ ಮಾಧವ ಕೋಡಿಬೈಲ್ ಅವರು ಕೇರಳದ ನಾಡ ಹಬ್ಬಕ್ಕೆ ಪ್ರೋತ್ಸಾಹಿವ ನಮ್ಮ ಈ ಒಗ್ಗಟ್ಟು ಉತ್ತಮವಾದದ್ದು ಹಾಗು ಸರಕಾರದಿಂದ ನಮ್ಮ ಸಮುದಾಯಕ್ಕೆ ಸಿಗುವ ಸವಲತ್ತುಗಳು ಪ್ರತಿಯೊಬ್ಬರಿಗೂ ಲಭ್ಯವಾಗುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಅಧ್ಯಕ್ಷೆ ಚಿತ್ರಾಕ್ಷಿ ಚಂದ್ರಹಾಸ್ ಕತ್ತೆರಿಕೊಡಿ ವಹಿಸಿದರು.ಕಾರ್ಯಕ್ರಮದಲ್ಲಿ ಹಿರಿಯವರ ಮತ್ತು ಕಾರ್ನವರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ, ,ಬಾಕುಡ ಸಮಾಜ ಕೇಂದ್ರ ಸಮಿತಿ ಸದಸ್ಯರಾದ ಶ್ರೀ ರಾಮ F.C.I ,ಶ್ರೀ ನಿತ್ಯಾನಂದ ಭಜನಾ ಮಂದಿರ, ಅಂಗಡಿಪದವು ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಬಿ.ಎಸ್.ಎನ್.ಎಲ್,ಬಾಕುಡ ಸಮಾಜ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸವಿತಾ ಬಾಲಚಂದ್ರ , ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಂಧ್ಯಾ ಭರತ್‌ರಾಜ್ ಅಟ್ಟೆಗೋಳಿ ,ಬಾಕುಡ ಸಮಾಜ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಕಾರ್ಲೆ,ಬಾಕುಡ ಸಮಾಜ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀ ಮನಮೋಹನ ಮಂಗಳೂರು,ಬಾಕುಡ ಸಮಾಜ ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀ ರಂಜು ಸಂತಡ್ಕ, ,ಬಾಕುಡ ಸಮಾಜ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀ ಜಯಪ್ರಕಾಶ್ ಮಂಜೇಶ್ವರಹಾಗು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಬಾಕುಡ ಸಮಾಜ ಮಹಿಳಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಸವಿತಾ ಸೋಂಕಾಲ್ ಸ್ವಾಗತಿಸಿ ,ಕು| ಹಸ್ತ ಮಂಜೇಶ್ವರ ಧನ್ಯವಾದವಿತ್ತರು.

ಆಬಳಿಕ ಸಮಾಜ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು , ಓಣಂ ಪೂಕಳಂ ಸ್ಪರ್ಧೆ ವಿಶೇಷ ಗಮನ ಸೆಳೆದ್ದಿದ್ದು ಮಧ್ಯಾಹ್ನ ಓಣಂ ಸಧ್ಯ ಕೂಡ ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ತುಳಸಿದಾಸ್ ಮಂಜೇಶ್ವರ ಅಧ್ಯಕ್ಷ ವಹಿಸಿದರು ವಹಿಸದರು , ಬಾಕುಡ ಸಮಾಜ ಕೇಂದ್ರ ಸಮಿತಿ ಗೌರವಾಧ್ಯಕ್ಷರು ಶ್ರೀಮತಿ ಸುಜಾತ ಶಿವ ಮಂಜೇಶ್ವರ,ಬಾಕುಡ ಸಮಾಜ ಕೇಂದ್ರ ಸಮಿತಿ ಉಪಾಧ್ಯಕ್ಷರು ಶ್ರೀಮತಿ ಬೇಬಿ ತಾರನಾಥ್,ಬಾಕುಡ ಸಮಾಜ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀಮತಿ ಸುನಿತಾ ತಾರನಾಥ್ ಮಂಗಳೂರು,ಬಾಕುಡ ಯುವ ವೇದಿಕೆ ಅಧ್ಯಕ್ಷರು ಶ್ರೀ ನಿರಂಜನ್ ಮಾಸ್ತರ್ ತೂಮಿನಾಡು,ಬಾಕುಡ ಸಮಾಜ ಮಹಿಳಾ ಸಮಿತಿ ಕೋಶಾಧಿಕಾರಿ ಕು| ರೇವತಿ ಉದ್ಯಾವರ ,ಪ್ರಚಾರ ಸಮಿತಿ ಕಾರ್ಯದರ್ಶಿ ಶ್ರೀ ಶರತ್ ಬೇಕೂರು,ಬಾಕುಡ ಸಮಾಜ ಮಹಿಳಾ ಸಮಿತಿ ಉಪಾಧ್ಯಕ್ಷರು ಶ್ರೀಮತಿ ತೇಜಶ್ರೀ ದಿನೇಶ್ ಪಾಂಡೇಶ್ವರ,ಬಾಕುಡ ಸಮಾಜ ಮಹಿಳಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಭವ್ಯ ಪ್ರಕಾಶ್ ಮಂಗಳೂರು,ಬಾಕುಡ ಸಮಾಜ ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀ ಪ್ರಕಾಶ್ ಎರುಂಬುಡೇಲು ಉಪಸ್ಥಿತರಿದ್ದರು ಆ ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಹಿರಿಯವರಾದ ಪ್ರವೀಣ್ ಮಂಜೇಶ್ವರ ಬಹುಮಾನ ವಿತರಿಸಿದರು,.

ಕಾರ್ಯಕ್ರಮಕ್ಕೆ ಶ್ರೀಮತಿ ಸೌಮ್ಯ ಸದಾಶಿವ ಕುಂಡೆವೂರು ಸ್ವಾಗತಿಸಿ ಕುಮಾರಿ ಸಾನಿಧ್ಯ ಸದಾಶಿವ ಮಂಗಳೂರು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!