ಸೆಪ್ಟೆಂಬರ್ 18 ಮತ್ತು 19 ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಎರಡು ದಿನಗಳ ಮಾರಾಟಗಾರರ ಅಭಿವೃದ್ಧಿ ವಿಚಾರ ಸಂಕೀರಣ ಕಾರ್ಯಕ್ರಮ.

ಮಂಗಳೂರು: ಭಾರತ ಸರ್ಕಾರದ ಎಂಎಸ್‌ಎಂಇ ಸಚಿವಾಲಯದ ಶಾಖೆ , ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಬೈಕಂಪಾಡಿ, ಮಂಗಳೂರು, ಕೆನರಾ ಕೈಗಾರಿಕಾ ಸಂಘ ಮಂಗಳೂರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 18 ಮತ್ತು 19 ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಎರಡು ದಿನಗಳ ಮಾರಾಟಗಾರರ ಅಭಿವೃದ್ಧಿ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಆಯೋಜಿಸಲಾಗುವುದೆಂದು ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಸುಂದರ್ ಎಸ್ . ಎಂ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮವನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ನಿರ್ದೇಶಕರಾದ ನಂದಕುಮಾರ್ ಪಿಳ್ಳೈ ಉದ್ಘಾಟಿಸಲಿದ್ದಾರೆ . ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ವಸ್ತುಗಳ ಪ್ರದರ್ಶನ ಮತ್ತು ವಿಚಾರ ಸಂಕೀರಣ ಒಳಗೊಂಡಿದೆ . ಇದು ಎಂಎಸ್‌ಎಂಇ ವಲಯಕ್ಕೆ ಮಾರುಕಟ್ಟೆ ಅವಕಾಶಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಅವುಗಳ ಜೊತೆಯಾಗಿ ದೊಡ್ಡ ಪ್ರಮಾಣದ ಕೈಗಾರಿಕೆಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಎಂಎಸ್‌ಎಂಇ ಗಳನ್ನು ಒಂದೇ ವೇದಿಕೆಗೆ ತರುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಪಿಎಸ್ಯು ಗಳು, ರೈಲ್ವೆ ಮತ್ತು ರಕ್ಷಣಾ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು, ಖಾಸಗಿ ದೊಡ್ಡ ಉದ್ಯಮಗಳು ಮತ್ತು ಈ ಪ್ರದೇಶದಿಂದ ಹಾಗೂ ನೆರೆಯ ರಾಜ್ಯಗಳಿಂದ ಎಂಎಸ್‌ಎಂಇ ಗಳು ಸೇರಿದಂತೆ ಸುಮಾರು 70 ಉದ್ಯಮಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು .

ಕಾರ್ಯಕ್ರಮವು ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗ ಕೌಶಲ್ಯದ ಅಭಿವೃದ್ಧಿಗೆ ಸಹಕಾರಿ ಆಗಲಿದೆ . ಈ ಪ್ರದೇಶದ ವಿದ್ಯಾವಂತ ಯುವಕರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಉದ್ಯಮವನ್ನು ಹೇಗೆ ಪ್ರಾರಂಭಿಸುವುದು, ಮಾರ್ಕೆಟಿಂಗ್ ಅವಕಾಶದ ಬಗ್ಗೆ ಜ್ಞಾನ , ನಾವೀನ್ಯತೆಯ ಪರಿಕಲ್ಪನೆಯ ತಿಳಿವಳಿಕೆಯನ್ನು ತಿಳಿಸಲಾಗುವುದು .

ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ MSME ಘಟಕಗಳು ಮತ್ತು ವಿಚಾರ ಸಂಕಿರಣದಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸುವ ಸಾರ್ವಜನಿಕರು ಶಾಖೆಯ MSME ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಭಾರತ ಸರ್ಕಾರ, ಮಂಗಳೂರು ಇವರನ್ನು ಸಂಪರ್ಕಿಸಿಕೊಳ್ಳುವಂತೆ ಕೋರಿಕೊಂಡರು .

ಸುದ್ದಿಗೋಷ್ಠಿಯಲ್ಲಿ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು ಇದರ ಸಹಾಯಕ ನಿರ್ದೇಶಕಿಯಾದ ಶ್ರುತಿ ಜಿ ಕೆ , ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎನ್ ಅರುಣ್ ಪಡಿಯಾರ್ , ಪಿ ಬಿ ಅಹಮ್ಮದ್ ಮುಡಾ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!