ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ – ಕಮಲ್ ಜಿತ್ ಸಿಂಗ್

ಕಾಸರಗೋಡು: ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ಬೆಳ್ಳಿಗೆ 10 ರಿಂದ 5 ಗಂಟೆಯ ತನಕ ಕೊಟ್ಟಾರ ಚೌಕಿಯಲ್ಲಿ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ ಎಂದು ಕಮಲ್ ಜಿತ್ ಸಿಂಗ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸುಖ್ವಿಂದರ್ ಸಿಂಗ್ , ಇಂದು ಪಂಜಾಬ್ ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಣಾಮ ಸಾವಿರಾರು ಕುಟುಂಬಗಳು ತಮ್ಮ ಮನೆ, ಹೊಲ ಹಾಗೂ ಜೀವನೋಪಾಯ ಕಳೆದುಕೊಂಡಿವೆ. ಬೆಳೆಗಳು, ಜಾನುವಾರುಗಳು ಹಾಗೂ ಆಸ್ತಿ-ಪಾಸ್ತಿಗಳು ಕೊಚ್ಚಿಹೋಗಿದ್ದು, ತಾತ್ಕಾಲಿಕ ಆಶ್ರಯಗಳಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಈ ಮಾನವೀಯ ಬಿಕ್ಕಟ್ಟಿನ ಹೊತ್ತಿನಲ್ಲಿ, ಮಂಗಳೂರಿನ ಸಿಖ್ ಸಮುದಾಯವು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯಿಂದ ನೆರವಿಗೆ ಕೈಚಾಚಿದೆ.
ದಕ್ಷಿಣ ಕನ್ನಡದ ಮಂಗಳೂರಿನ ಸಿಖ್ ಸಮುದಾಯದ ಸಹಯೋಗದೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ . ಈ ಭಾಗದಲ್ಲಿ ಸಂಗ್ರಹವಾಗುವ ಹಣವನ್ನು ಬೆಂಗಳೂರಿನ ಉಲ್ಸೂರಿನ ಶ್ರೀ ಸಿಂಗ್ ಸಭಾ ಗುರುದ್ವಾರಕ್ಕೆ ಹಸ್ತಾಂತರ ಮಾಡಲಾಗುವುದು . ಅಲ್ಲಿನ ಸ್ವಯಂಸೇವಕರ ತಂಡವು ಅದನ್ನು ನೇರವಾಗಿ ಪ್ರವಾಹ ಸಂತ್ರಸ್ತರಿಗೆ ವಿತರಿಸುವುದಾಗಿ ತಿಳಿಸಿದರು . ಮಂಗಳೂರಿನಲ್ಲಿ ಕೊಟ್ಟಾರ ಚೌಕಿಯಲ್ಲಿ ದೇಣಿಗೆ ಸಂಗ್ರಹಣೆ ಅಭಿಯಾನಕ್ಕೆ ಈ ಭಾಗದ ಜನರು ಕೈ ಜೋಡಿಸುವಂತೆ ಕೋರಿಕೊಂಡರು .

ಸುದ್ದಿಗೋಷ್ಠಿಯಲ್ಲಿ ಬಲವಿಂದ್ರ್ ಸಿಂಗ್ , ಇಕ್ಬಲ್ ಸಿಂಗ್ , ಹರ್ಭಜನ್ ಸಿಂಗ್ ರಂಧವ ಮುಂತಾದರವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!