ಮಂಗಳೂರು: ರಾಜ್ಯ ಕಾರ್ಮಿಕ ವಲಯವನ್ನು ಸುಧಾರಣೆಯನ್ನು ತರುವಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿಯು ಪ್ರಧಾನ ಪಾತ್ರವನ್ನು ವಹಿಸಲಿದೆ . ರಾಜ್ಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸಂಘಟಿತ ಮತ್ತು ಅಸಂಘಟಿಕ ಕಾರ್ಮಿಕ ವಲಯಗಳಲ್ಲಿ ಕನಿಷ್ಠ ವೇತನ ಜಾರಿಗೆ ಬರುವುದರಿಂದ ಅವರ ಜೀವನ ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆಯನ್ನು ಕಾಣಲಿದೆ ಎಂದು ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ,, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದರು .
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈ ಮೊದಲು ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ ಉನ್ನತ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿತ್ತು . ಆದರೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ ನಿರ್ದೇಶನದಂತೆ ಈ ಮಂಡಳಿಗೆ ಅಧ್ಯಕ್ಷರನ್ನಾಗಿ ರಾಜಕೀಯ ಮತ್ತು ಸಾಮಾಜಿಕ ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳ ನೇಮಕ ಮಾಡಲಾಗಿದೆ . ಇದು ಕಾರ್ಮಿಕರ ಸ್ಥಿತಿಗತಿಯನ್ನು ಬಹುಬೇಗನೆ ತಿಳಿಯಲು ಸಹಕಾರಿ ಆಗಿದೆ . ಇದು ಕಾರ್ಮಿಕರ ಪರವಾಗಿರುವ ದೃಷ್ಟಿಕೋನವಾಗಿದೆ .
ಸಚಿವ ಸಂತೋಷ್ ಎಸ್. ಲಾಡ್ ಅಕ್ಟೋಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸವನ್ನು ಕೈಗೊಳ್ಳಲಿದ್ದು ಈ ಕ್ಷಣ ಶ್ರಮ ವರ್ಗದವರಿಗೆ ವಿಶೇಷವಾಗಿ ಸ್ಮಾರ್ಟ್ ಕಾರ್ಡ್ಗಳನ್ನು ಹಸ್ತಾಂತರವನ್ನು ಮಾಡಲಿದ್ದಾರೆ . ಕರ್ನಾಟದಲ್ಲಿ ಈಗಾಗಲೇ ಕನಿಷ್ಠ ವೇತನವನ್ನು 14 ಸಾವಿರದಿಂದ 19 ಸಾವಿರದವರೆಗೆ ನಿಗದಿ ಮಾಡಲಾಗಿದೆ . ಶೀಘ್ರವೇ ಕನಿಷ್ಠ ವೇತನ ಜಾರಿಗೆ ತರುವ ಕ್ರಮವನ್ನು ಕೈಗೊಳ್ಳಲಾಗುವುದು . ಮುಂದಿನ ವರ್ಷಗಳಲ್ಲಿ ಕನಿಷ್ಠ ವೇತನವನ್ನು ಹೆಚ್ಚು ಮಾಡುವ ಯೋಜನೆಗಳಿವೆ ಎಂದರು .ರಾಜ್ಯದಲ್ಲಿ ೨ ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕ ದುಡಿಯುವ ವರ್ಗ ಮತ್ತು ೫೩ ಲಕ್ಷಕ್ಕೂ ಅಧಿಕ ಸಂಘಟಿತ ಕಾರ್ಮಿಕ ದುಡಿಯುವ ವರ್ಗಗಳಿವೆ . ಈ ಶ್ರಮಿಕರ ಪರವಾಗಿ ಸರಕಾರ ಕಲ್ಯಾಣ ಕಾರ್ಯವನ್ನು ಕೈಗೊಳ್ಳಲಿದೆ ಎಂದು ಈ ಕ್ಷಣ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಸದಾನಂದ ಮಾವಾಜೆ, ಮುಸ್ತಫಾ ಸುಳ್ಯ, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜಾ, ಜಯಶೀಲ ಅಡ್ಯಂತಾಯ, ನಿತ್ಯಾನಂದ ಶೆಟ್ಟಿ, ಕಿರಣ್ ಕುಮಾರ್ ಬುಡ್ಲೆಗುತ್ತು ಉಪಸ್ಥಿತರಿದ್ದರು.