ಮಂಜೇಶ್ವರ : ಉಪ್ಪಳ ಹಿದಾಯತ್ ಬಜಾರಿನ ಕೊಲ್ಲಿ ಉದ್ಯೋಗಿಯೊಬ್ಬರ ಮನೆಗೆ ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಉಪ್ಪಳ ಹಿದಾಯತ್ ಬಜಾರಿನಲ್ಲಿ ವಾಸವಾಗಿರುವ ಅಬೂಬಕ್ಕರ್ ಎಂಬವರ ಮನೆಗೆ ಗುಂಡು ಹಾರಿಸಿರುವ ಬಗ್ಗೆ ದೂರಲಾಗಿದೆ.
ಗುಂಡು ಹಾರಾಟದಿಂದ ಮನೆಯ ಕಿಟಿಕಿಯ ಗಾಜುಗಳು ಪುಡಿಯಾಗಿದೆ. ಅಬೂಬಕ್ಕರ್ ಕತಾರ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಈತನ ಪತ್ನಿ ಹಾಗೂ ಪುತ್ರಿ ಮನೆಯಲ್ಲಿದ್ದರೆಂದು ಹೇಳಲಾಗಿದೆ.ಕಾರಿನಲ್ಲಿ ಆಗಮಿಸಿದ ತಂಡ ಗುಂಡು ಹಾರಿಸಿ ತಕ್ಷಣ ಅಲ್ಲಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಮಾಹಿತಿ ಅರಿತು ಸ್ಥಳಕ್ಕೆ ತಲುಪಿದ ಮಂಜೇಶ್ವರ ಪೊಲೀಸರು ಮನೆಯವರಿಂದ ಮಾಹಿತಿ ಕಲೆ ಹಾಕಿ ತನಿಖೆ ತೀವೃ ಗೊಳಿಸಿದ್ದಾರೆ.