ಡಿಸೆಂಬರ್ 20: “Nitte Nexus 2025ನೇ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ ಸಂಭ್ರಮ … !

ಮಂಗಳೂರು:WENAMITAA (NMAMIT ಹಳೆಯ ವಿದ್ಯಾರ್ಥಿಗಳ ಸಂಘ) ಮತ್ತು Nitte Mahalinga Adyantheya Memorial Institute of Technology (NMAMIT) ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ “Nitte Nexus 2025” ಡಿಸೆಂಬರ್ 20, 2025 ರಂದು ಸಂಜೆ 4 ಗಂಟೆಯಿಂದ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ನೆನ್ನನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮುಲ್ಕಿ ಜೀವನ್ ಕೆ. ಶೆಟ್ಟಿ ತಿಳಿಸಿದರು .

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, 1986ರಲ್ಲಿ ಸ್ಥಾಪಿತವಾದ NMAMIT ಈಗ 40ನೇ ವರ್ಷದ ಸೇವೆ ಹಾಗೂ ಶ್ರೇಷ್ಠತೆಯ ಪಯಣಕ್ಕೆ ಕಾಲಿಡುತ್ತಿದ್ದು ವಿಶ್ವದಾದ್ಯಂತ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 25,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಬಲಿಷ್ಠ ಜಾಲವನ್ನು ಹೊಂದಿದೆ ಎಂದು ಹೇಳಿದರು.ಹಳೆಯ ಸ್ನೇಹಿತರೊಂದಿಗೆ ಪುನರ್‌ಸಂಪರ್ಕ, ವೃತ್ತಿ ನೆಟ್ವರ್ಕಿಂಗ್, ಸ್ಮೃತಿಗಳ ಪುನರ್‌ಅನುಭವ ಹಾಗೂ ಉದ್ಯಮ-ಶೈಕ್ಷಣಿಕ ಸಹಕಾರ ವೃದ್ಧಿ ಪಡಿಸುವ ಉದ್ದೇಶದಿಂದ ಈ ಜಾಗತಿಕ ಸಮಾವೇಶವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ನಿಮ್ಮ ಶಿಕ್ಷಣ ಟ್ರಸ್ಥಾನ ಅಧ್ಯಕ್ಷರು ಹಾಗೂ Nitte Deemed to be University ಯ ಚಾನ್ಸಲರ್ ಶ್ರೀ ಎನ್. ವಿನಯ್ ಹೆಗ್ಡೆ ಉದ್ಘಾಟಿಸಲಿದ್ದಾರ. NMAMIT ಮತ್ತು Nitte University ಯ ಇತರ ಗಣ್ಯರೂ ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವದ ಅನೇಕ ಭಾಗಗಳಿಂದ ಸುಮಾರು 1000 ಹಳೆಯ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಸಂಸ್ಥೆಗೆ 25 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ಉಪನ್ಯಾಸಕರು ಹಾಗೂ ನಿವೃತ್ತ ಸಿಬ್ಬಂದಿಗೂ ವಿಶೇಷ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ WENAMITAA ಅಧ್ಯಕ್ಷರು ಮುಲ್ಕಿ ಜೀವನ್ ಕೆ. ಶೆಟ್ಟಿ ಉಪಾಧ್ಯಕ್ಷರು ಅವಿನಾಶ ಕೃಷ್ಣ ಕುಮಾರ್, Nitte Nexus 2025 ಕನರ್ ಸಂದೀಪ್ ರಾವ್ ಇಡ್ಡೆ ಸಹ-ಕನ್ನಿನರ್‌ಗಳು ಮಹೇಶ್ ಕಾಮತ್ ಮತ್ತು ಮೇಘನಾ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!