ಮಂಗಳೂರು: ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ನಶೆ ಮುಕ್ತ ಮಂಗಳೂರು ಅಭಿಯಾನವನ್ನು ಆಯೋಜಿಸಲಾಗಿದೆ.ಯುವ ಜನತೆಯಲ್ಲಿ ಮಾದಕ ದ್ರವ್ಯಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸೃಜನಾತ್ಮಕ ಸಮಾಜ ಕಟ್ಟುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಅಭಿಯಾನವನ್ನು ಡಿ. 27ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಮೇಕ್ ಎ ಚೇಂಜ್ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುಹೈಲ್ ಕಂದಕ್ ತಿಳಿಸಿದರು.
ಅವರು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಸನ್ಮಾನ್ಯ ಕರ್ನಾಟಕ ರಾಜ್ಯ ಸಭಾಧ್ಯಕ್ಷರಾದ ಯುಟಿ ಖಾದರ್, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಹಿತ ಹಲವು ಗಣ್ಯರು ಉಪಸ್ಥಿತರಿರುತ್ತಾರೆ. ವಿಶೇಷವಾಗಿ ಮಂಗಳೂರು ಬಿಷಪ್, ರಾಮಕೃಷ್ಣ ಮಟದ ಸ್ವಾಮೀಜಿಗಳು ಮತ್ತು ಮಂಗಳೂರು ಖಾಝಿಗಳನ್ನೊಳಗೊಂಡು ಹಲವು ಧಾರ್ಮಿಕ ಮುಖಂಡರು ಅಭಿಯಾನದೊಂದಿಗೆ ಸೇರಿಕೊಳ್ಳಲಿದ್ದಾರೆ ಹಾಗೂ ನಮ್ಮ ತುಳುನಾಡಿನ ಪ್ರಸಿದ್ದ ನಟರು ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ ಎಂದರು .
ಈ ಕಾರ್ಯಕ್ರಮವು ವಿಶೇಷವಾಗಿ ಯುವಕರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಿದ ಎಂದರು.
ಯುವ ಜನತೆಯನ್ನು ಸೆಳೆಯಲು ವಿವಿಧ ಸ್ಪರ್ಧೆಗಳು :ರೀಲ್ & ಶಾರ್ಟ್ ವಿಡಿಯೋ ಸ್ಪರ್ಧೆ : ಪ್ರಸ್ತುತ ಶೈಲಿಯಲ್ಲಿ ಯುವಕೇಂದ್ರಿತವಾಗಿ 30-60 ಸಕೆಂಡುಗಳ ರೀಲ್ ಅಥವಾ ಶಾರ್ಟ್ ವಿಡಿಯೋ ತಯಾರಿಸಿ, ಮಾದಕ ದ್ರವ್ಯದ ಹಾನಿ ಮತ್ತು ಜಾಗೃತಿ ಸಂದೇಶ ಜನರಿಗೆ ತಲುಪಿಸುವುದು.ಮಾದಕಮುಕ್ತ ಇನೋವೇಶನ್ ಮಾದರಿ ಪ್ರದರ್ಶನ; ಅಂತರ್ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ಮುಕ್ತ ಮಂಗಳೂರಿನ ಮಾದರಿಗಳು ಅಥವಾ ಅವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ.ಪೇಪರ್ ಪ್ರೆಸೆಂಟೇಶನ್, ಮಾದಕ ದ್ರವ್ಯದ ತಡೆಗೆ ಹೊಸ ಚಿಂತನೆಯ ಬಗ್ಗೆ ಪ್ರಬಂದ ಬರೆದು ಆಯ್ಕ ಪ್ರಬಂದ ಮಂಡನೆ ಮಾಡುವುದುಫಿಟ್ನಸ್ ಚಾಲೆಂಜ್, ಮಂಗಳೂರಿನ ಪ್ರತಿಷ್ಟಿತ ಮಾಲ್ ನಲ್ಲಿ ನಡೆಸಲಾಗುವುದು
ಡಿಜಿಟಲ್ ಪೋಸ್ಟರ್ ಸ್ಪರ್ಧೆ: ಸೃಜನಾತ್ಮಕ ಡಿಜಿಟಲ್ ಪೋಸ್ಟರ್ ಮೂಲಕ ಮಾದಕ ಮುಕ್ತ ಜಾಗೃತಿ ಮೂಡಿಸಲು ಅವಕಾಶ.
ಒನ್ ಡೇ ಇನ್‌ಪ್ಪುಯೆನ್ಸರ್: ಕ್ರಿಯೇಟಿವ್ ಕಂಟೆಂಟ್ ಮುಖಾಂತರ ಸಮಾಜಕ್ಕೆ ಇನ್‌ಪೂಯೆನ್ಸರ್ ಆಗಿ ಮಾದಕ ಮುಕ್ತ ಸಂದೇಶ ಹರಡುವ ಅಭ್ಯಾಸಕ್ಕಾಗಿ ಈ ಕಾರ್ಯಕ್ರಮ.
ಫ್ಲಾಶ್ ಮೋಬ್, ಸಂಗೀತ ಮತ್ತು ನೃತ್ಯದ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಜಾಗೃತಿ ಕಾರ್ಯಕ್ರಮ. ಈ ಕಾರ್ಯಕ್ರಮವು ಯವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಎಸಿಪಿ ರವೀಶ್ ನಾಯಕ್, ಬಾರ್ನ್ ಅಗೇನ್ ರಿಕವರಿ ಸೆಂಟರ್‌ನ ಸಹ ಸ್ಥಾಪಕಿ ಬೀನಾ ಸಲ್ಡಾನ, ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಆಲ್ವಿನ್ ಡಿಸೋಜಾ, ವಾಯ್ಸ್ ಆಫ್ ಸ್ಟೂಡೆಂಟ್ಸ್‌ನ ಅಧ್ಯಕ್ಷ ಅಭಿಷೇಕ್ ವಾಲ್ಮಿಕಿ, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.