ಟಿಕೆಟ್ ತೆಗೆದು ಮೆಸ್ಸಿ ನೋಡಲು ಬಂದ ಅಭಿಮಾನಿಗಳಿಗೆ ಭಾರಿ ಮೋಸ .. ! ಅಷ್ಟಕ್ಕೂ ಕೊಲ್ಕತ್ತಾ ಸ್ಟೇಡಿಯಂನಲ್ಲಿ ಕಿರಿ ಕಿರಿ ನಡೆಯಲು ಕಾರಣವೇನು … !

ಕೊಲ್ಕತ್ತಾ: ಅರ್ಜೆಂಟೀನಾ ಫುಟ್​ಬಾಲ್​ ಆಟಗಾರ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗೋಟ್ ಇಂಡಿಯಾ ಟೂರ್​ನ ಕಾರ್ಯಕ್ರಮದ ಭಾಗವಾಗಿ ಇಂದು ಮೆಸ್ಸಿ ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಹೊರಗೆ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಬಳಿಕ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಕಾಣಿಸಿಕೊಂಡಿದ್ದರು. ಆದರೆ ಕೇವಲ 10 ನಿಮಿಷಗಳಲ್ಲೇ ಅರ್ಜೆಂಟೀನಾ ಫುಟ್​ಬಾಲ್ ತಾರೆ ಮೈದಾನದಿಂದ ತೆರಳಿದ್ದಾರೆ.

ಇತ್ತ ಟಿಕೆಟ್ ಖರೀದಿಸಿ ಮೆಸ್ಸಿಯನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ. ಮೆಸ್ಸಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಫ್ಯಾನ್ಸ್​ ಕ್ರೀಡಾಂಗಣದೊಳಗೆ ಬಾಟಲಿಗಳನ್ನು ಎಸೆಯಲಾರಂಭಿಸಿದರು. ಅಲ್ಲದೆ ಸ್ಥಳದಲ್ಲಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಹುಚ್ಚಾಟ ಮೆರೆದಿದ್ದಾರೆ. ಬ್ಯಾರಿಕೇಡ್​ಗಳನ್ನು ಮುರಿದು ಮೈದಾನಕ್ಕೆ ನುಗಿದ್ದ ಅಭಿಮಾನಿಗಳು ದಾಂಧಲೆ ಆರಂಭಿಸಿದ್ದು, ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದೀಗ ಪೊಲೀಸರು ಸ್ಟೇಡಿಯಂನಲ್ಲಿದ್ದ ಎಲ್ಲರನ್ನು ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!