ಮನಸ್ಸೆಂದರ್ ಹೀಗ್ !

ತಪ್ಪೆಂದುಕೊಂಡವರು ಚ ಒಪ್ಪುಗತನಾಡುವರುನಾಳ್ (ಚ ಅರ್ಥ: ಕೂಡ)
ತುಪ್ಪವನುಂಡವರು ಚ ಬೆಪ್ಪುಗತನಾಗುವರುನಾಳ್
ಕಿವಿದೆರಡು ಸವಿದೀರ್ಪೆ ಹಿತವನ್ ಬಯಸಿ
ಕಣ್ಣೆರಡು ನೋಡಿರ್ಪೆ ನಿಜವನ್ ಅರಸಿ
ನಾಲಿಗೆಯೊಂದ್ ನುಡಿದಿರ್ಪೆ ಎಲ್ಲವನ್ ಬೆರೆಸಿ !!

ಏವ, ಮನಸ್ಸೆಂದರ್ ಹೀಗ್ ! (ಏವ ಅರ್ಥ: ಖಂಡಿತವಾಗಿಯೂ)
ಮಾಯೆಯೊಳ್ ಮಾರಿಯೊಳ್
ಸಕಲಕಲಾನೊಲ್ಲಭನ ಮನದೋಳ್ ಅಡಗಿರ್ಪ
ಕಹಿ ಸತ್ಯ – ಸಿಹಿ ಮಿತ್ಯದ್ ವಿಷಯದೊಳ್
ಮನಸ್ಸಿಗಿಡಿದಿರ್ಪ ಆ ಕ್ಷಣದೊಳ್
ನಾಲಿಗೆಯೊಂದ್ ನುಡಿದಿರ್ಪ್ ಎಲ್ಲವನ್ ಬೆರೆಸಿ !!

ಏವ, ಮನಸ್ಸೆಂದರ್ ಹೀಗ್ !
ನಿನ್ನೆಯೊಳ್ ನಾಳೆಯೊಳ್
ಬಿಗಿದಿರ್ಪ ಉಸಿರಿನೊಳ್ ಚ
ಕರ್ಮದರಿವಿರ್ಪ ಹೃದಯದೊಳ್ ಚ
ಅನುಭವದೋಳ್ ಬಿಸಿತಾಪವಂ ಚರ್ಮಾಛಃ
ಮುನ್ನಾಲಗೆಯೊಂದನ್ಮುಂದಿರಿಸಿ ಉವಾಚಸ್ವಃ ( ಉವಾಚಸ್ವಃ ಅರ್ಥ : ಹೇಳುವುದು)
ಕಿವಿದೆರಡು ಸವಿದೀರ್ಪ ಹಿತವನ್ ಬಯಸಿ !!

ಏವ, ಮನಸ್ಸೆಂದರ್ ಹೀಗ್ !
ಪ್ರೀತಿಯೋಳ್ ಪ್ರೇಮದೊಳ್
ಪರಾಗವನ್ ಹೀರಿಪ್ಪ ಬ್ರಮರದೊಳ್
ಮಿತ್ಯಾಮೃತಾನ್ನಿತ್ಯದೊಳ್ ಬೆರೆಸಿರ್ಪ
ಬೃಷ್ಟಾನ್ನದಿಂಕಂಡು;
ಕುತಂತ್ರದೊಳ್ ಬೆದರಿರ್ಪ್ ಬೊಮ್ಮ ಚ ( ಬೊಮ್ಮ ಅರ್ಥ : ದೇವರು)
ಅನವರತ ಕಾರ್ಯತಃ ಸ್ವಯಂತಃ
ಕಣ್ಣೆರಡು ನೋಡಲೆಮ್ ನಿಜವನ್ ಅರಸಿ !!

ಏವ, ಮನಸ್ಸೆಂದರ್ ಹೀಗ್ !
ಕ್ಷಣಕ್ಷಣದಿಂ ಬದಲ್ಗೊಂಡ್
ಚಣಚಣದಿಂ ಮುದಗೊಂಡ್
ಹುಸಿಕೋಪದೊಳ್ ಬಿಸಿತಾಪದೊಳ್
ಕಂಡೀರ್ಪ್ ಕೇಳಿರ್ಪ ಸೊಲ್ಲಿರ್ಪ ನುಡಿಗಳ್
ಭಾವಂತರಂಗದೊಳ್ ನರ್ತನಮ್ ಗೈದ್
ಪ್ರೀತಿಪ್ರೇಮಂ ಮರೆತೊಂದಾಗ್
ನಿಜವನ್ನರಿತಂ ಬಾಳ್ಗೆ
ತುಪ್ಪವನುಂಡವರ್ ಚ ಬೆಪ್ಪುಗತನಾಗುವರ್
ತಪ್ಪೆಂದುಕೊಂಡವರ್ ಚ ಒಪ್ಪುಗತನಾಗುವರ್
ಸಕಾಲಂ ಪ್ರೀತಿಯೊಂದೇ ಜಗದ್ಗುರುಮ್
ಇದಂ, ಪರಿವರ್ತನಮ್ ಜಗತ್ ನಿಯಮಮ್!!


✍️. ರಾಘವೇಂದ್ರ ಏನ್ ದೇವಾಡಿಗ
ಉಳ್ಳೂರು-11
, ಬೈಂದೂರು
– 576219
+91 9743059880
k.raghu794@gmail.com

SHARE
Loading spinner

Leave a Reply

Your email address will not be published. Required fields are marked *

error: Content is protected !!