ಮಂಜೇಶ್ವರ : ಪೆರಿಯ ನವೋದಯ ನಗರದಲ್ಲಿ ನಿರ್ಮಾಣದಲ್ಲಿರುವ ಪೆಟ್ರೋಲ್ ಬಂಕ್ ನ ಟ್ಯಾಂಕ್ ನಿರ್ಮಿಸಲು ಅಗೆದ ಹೊಂಡದಲ್ಲಿ ಜೀರ್ಣಾವಸ್ಥೆಯಲ್ಲಿರುವ ಪುರುಷನ ಶವವೊಂದು ಪತ್ತೆಯಾಗಿದೆ.
ಶವದ ಗುರುತು ಪತ್ತೆಯಾಗಿಲ್ಲ. ಗುರುವಾರ ಮಧ್ಯಾಹ್ನದ ಸುಮಾರಿಗೆ ಆಳವಿರುವ ಹೊಂಡದಲ್ಲಿ ಶವ ಮಣ್ಣಿನಲ್ಲಿ ಕೊಳೆತು ಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ.
ಪೆಟ್ರೋಲ್ ಬಂಕ್ ಪರಿಸರದಲ್ಲಿ ದುರ್ಗಂಧ ಭೀರಿದ ಹಿನ್ನೆಲೆಯಲ್ಲಿ ಪರಿಸರದ ಮನೆಯವರು ಆಗಮಿಸಿ ನಡೆಸಿದ ಶೋಧದಲ್ಲಿ ಶವ ಪತ್ತೆಯಾಗಿದೆ.
ಶವ 3 ದಿನ ಹಳೆಯದಾಗಿರಬಹುದಾಗಿ ಶಂಕಿಸಲಾಗಿದೆ. ಮಾಹಿತಿ ಅರಿತು ಊರವರು ಹಾಗೂ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.