ಬಂಟ್ವಾಳದಲ್ಲಿ ಎಂಡಿಎಂಎ ಸಾಗಾಟ ಪತ್ತೆ: ಮೂವರು ಬಂಧನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂ.ಡಿ.ಎಂ.ಎ ಸಾಗಾಟ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿರವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಪ್ಲೈಒವರ್ ಬಳಿ ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸಿದ್ದರು. ಈ ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿರುತ್ತಾರೆ. ಕಾರನ್ನು ಪರಿಶೀಲಿಸಿದಾಗ ಮನೋದ್ರೇಕಕಾರಿ ವಸ್ತು ಸೇವನೆ ಮಾಡಲು ಬಳಸುವ ಸಾಧನ ಕಂಡುಬಂದಿದ್ದು, ಈ ಬಗ್ಗೆ ಅವರನ್ನು ವಿಚಾರಿಸಿದಾಗ ಎ,ಜುಬೈರ್, ಮುಹಮ್ಮದ್ ಸವಾದ್ ಹಾಗೂ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಎಂಬುದಾಗಿ…