Avatar

NAMMA MEDIA 24X7

ಮಹಾಲಿಂಗೇಶ್ವರ ದೇವಾಲಯ ವಿವಾದ: ‘ಇದು ವೈಯಕ್ತಿಕ ವಿಷಯ, ದೇವಸ್ಥಾನಕ್ಕೆ ಸಂಬಂಧವಿಲ್ಲ’ – ಅಧ್ಯಕ್ಷ ಈಶ್ವರ ಭಟ್

ಪುತ್ತೂರು : ಮಹಾಲಿಂಗೇಶ್ವರ ದೇವಾಲಯದ ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವುದಕ್ಕೆ ಇದು ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ಎರಡು ಮನೆಗೆ ಸಂಬಂಧಪಟ್ಟ ವಿಷಯ. ದೇವಸ್ಥಾನದ ಪೂರ್ವಶಿಷ್ಟ ಸಾಂಪ್ರದಾಯದಂತೆ ನಾವು ಈ ಹಿಂದೆ ಹೇಗಿತ್ತೋ ಹಾಗೆ ಮುಂದುವರಿಯುತ್ತೇವೆ ಎಂದು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾನಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಪ್ರತಿಕ್ರಿಯಿಸಿದ್ದಾರೆ. ಮಹಾಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಗಳಿಂದ ದೇವಾಲಯದ ವಾಸ್ತು ಇಂಜಿನಿಯರ್ ಪಿ ಜಿ ಜಗನ್ನಿವಾಸ್ ರಾವ್ ಅವರನ್ನ ಹೊರಗಿಡಬೇಕು. ಇಲ್ಲವಾದಲ್ಲಿ ನಾನು ಕೊಡಿಮರದ ಅಡಿಯಲ್ಲಿ…

Read More

ಗ್ಯಾಸ್ ಅಭಾವದಿಂದ ಪುತ್ತೂರಿನಲ್ಲಿ ಆಟೋ ಸಂಚಾರ ಅಸ್ತವ್ಯಸ್ತ

ಪುತ್ತೂರು: ನಗರದಲ್ಲಿ ತಲೆದೋರಿರುವ ಗ್ಯಾಸ್‌ ಕೊರತೆ ಇದೀಗ ಆಟೋ ರಿಕ್ಷಾ ಚಾಲಕರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಪುತ್ತೂರಿನ ಬೋಲ್ವಾರ್, ಸಂಪ್ಯ ಪ್ರದೇಶದ ಗ್ಯಾಸ್ ಪಂಪ್, ಮುಕ್ರಂಪಾಡಿ ಬಳಿ ಆಟೋಗಳು ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಂತು ಕಾಣಿಸಿಕೊಂಡವು. ಗ್ಯಾಸ್‌ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಉದ್ಯೋಗಕ್ಕೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.ಬೆಳಿಗ್ಗೆಯಿಂದಲೇ ಪಂಪ್ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿ, ಸಂಚಾರಕ್ಕೂ ಅಡಚಣೆ ಉಂಟಾದ ದೃಶ್ಯ ಕಂಡುಬಂದಿತು.ಗ್ಯಾಸ್‌ ಕೊರತೆಯಿಂದಾಗಿ ಪ್ರಯಾಣಿಕರಿಗೆ…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ಘಟಕದ ಅಷ್ಟಮ ಸಂಭ್ರಮ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಅವರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ,…

Read More

ಕಾಪು ರಂಗ ತರಂಗ ತಂಡದ ಹಿರಿಯ ಕಲಾವಿದ ಸುಜಿತ್ ಶೆಟ್ಟಿ ಪಾದೂರು ನಿಧನ

ಉಡುಪಿ: ತುಳು ರಂಗಭೂಮಿ ಕಲಾವಿದ, ಕಾಪು ರಂಗ ತರಂಗ ನಾಟಕ ತಂಡದ ಸ್ಥಾಪಕ ಸದಸ್ಯ, ಮಾಜಿ ಸಂಚಾಲಕ ಸುಜಿತ್ ಶೆಟ್ಟಿ ಪಾದೂರು (54) ಶುಕ್ರವಾರ ನಿಧನ ಹೊಂದಿದರು. ಪ್ರಸಿದ್ಧ ರಂಗ ಕಲಾವಿದರಾಗಿದ್ದ ಅವರು ಹಾಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಪಾತ್ರಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗ ತರಂಗ ಕಲಾವಿದರು ತಂಡದ ಸ್ಥಾಪಕ ಸದಸ್ಯರಾಗಿ, ತಂಡದ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಕೆಲವು…

Read More

ರಂಗಸ್ಥಳದಲ್ಲಿ ಮಹಿಷಾಸುರನ ರೌದ್ರಾವತಾರ: ಕಲಾವಿದನ ವರ್ತನೆಗೆ ಪರ-ವಿರೋಧ ಚರ್ಚೆ

ಉಡುಪಿ, ಏಪ್ರಿಲ್ 3: ಯಕ್ಷಗಾನ ರಂಗಸ್ಥಳದಲ್ಲಿ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಇದೀಗ ವಿವಾದಕ್ಕೆ ಕಾರಣವಾಗಿದೆ. ಯಕ್ಷಗಾನ ಸೇವೆಯ ವೇಳೆ ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದ ಮಹಿಷಾಸುರ ಪಾತ್ರಧಾರಿ ರಂಗಮಂಟಪದಲ್ಲಿ ಅಬ್ಬರಿಸುವ ಸಂದರ್ಭದಲ್ಲಿ ಕಂಬಕ್ಕೆ ತಲೆಯನ್ನು ಜೋರಾಗಿ ಗುದ್ದಿಕೊಂಡ ಘಟನೆ ಪ್ರೇಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಕೆಲವರು ಕಲಾವಿದನ ತೀವ್ರ ಅಭಿವ್ಯಕ್ತಿಯನ್ನು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದು ಮೆಚ್ಚಿಕೊಂಡಿದ್ದಾರೆ. ಇನ್ನೊಂದೆಡೆ,…

Read More

ಮಂಜೇಶ್ವರದಲ್ಲಿ 2006ರ ಇತಿಹಾಸ ಮರುಕಳಿಸುವ ಸೂಚನೆ? ತ್ರಿಕೋನ ಸ್ಪರ್ಧೆಯಲ್ಲಿ ಎಡರಂಗಕ್ಕೆ ಮೇಲುಗೈ ಸಂಕೇತ

ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ, ಗಡಿ ನಾಡು ಮಂಜೇಶ್ವರದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಕುತೂಹಲದ ಘಟ್ಟ ತಲುಪಿದೆ. ಇಲ್ಲಿನ ಸಾಂಪ್ರದಾಯಿಕ ತ್ರಿಕೋನ ಸ್ಪರ್ಧೆಯು ಹೊಸ ತಿರುವು ಪಡೆದುಕೊಂಡಿದ್ದು, 2006ರ ಚುನಾವಣಾ ಫಲಿತಾಂಶ ಮರುಕಳಿಸುವ ಮುನ್ಸೂಚನೆಗಳು ದಟ್ಟವಾಗುತ್ತಿದೆ. ​ಸ್ಥಳೀಯ ಅಭ್ಯರ್ಥಿಗಳ ನಡುವೆ ಬಿರುಸಿನ ಪೈಪೋಟಿ ಈ ಬಾರಿಯ ವಿಶೇಷವೆಂದರೆ ಯುಡಿಎಫ್ ಮತ್ತು ಎಲ್‌ಡಿಎಫ್ ಎರಡೂ ರಂಗಗಳು ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿರುವುದು. ಇದು ಮತದಾರರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು…

Read More

ಮಂಗಳೂರಿನಲ್ಲಿ ಏಪ್ರಿಲ್ 7ರಂದು ‘ಗುರುವಂದನಾ’ ಮಹೋತ್ಸವ

ಸೋದೆ ಶ್ರೀ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯವಾದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ವತಿಯಿಂದ ಏಪ್ರಿಲ್ 7ರಂದು ಮಂಗಳೂರಿನಲ್ಲಿ ‘ಗುರುವಂದನಾ’ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ ಎಂದು ಮಂಗಳೂರು ‘ಗುರುವಂದನಾ’ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೇಟ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಅಂದು ಸಂಜೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾ ಭವನದಲ್ಲಿ ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಭಕ್ತಿಪೂರ್ವಕ…

Read More

ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19ರಿಂದ ಬ್ರಹ್ಮಕಲಶೋತ್ಸವ

ಮಂಗಳೂರಿನ ಅತ್ತಾವರದಲ್ಲಿರುವ ಐತಿಹಾಸಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 19ರಿಂದ 23ರವರೆಗೆ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅಯ್ಯಪ್ಪ ಸಮಿತಿಯ ಅಧ್ಯಕ್ಷರಾದ ಸೂರಜ್ ರಾಘವನ್ ತಿಳಿಸಿದರು . ಅವರು ನಗರದ ಪತ್ರಿಕಾಭವದನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಉತ್ಸವದ ಅಂಗವಾಗಿ ಏಪ್ರಿಲ್ 19ರಂದು ಮಂಗಳಾ ದೇವಿ ದೇವಸ್ಥಾನದಿಂದ ಹೊರಕಾಣಿಕೆ ಮೆರವಣಿಗೆ ಹೊರಡಲಿದ್ದು , ಅದು ಅತ್ತಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ತಲುಪಲಿದೆ. ಐದು ದಿನಗಳ ಕಾಲ…

Read More

ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಗೆ ಪಿಟ್ ಎನ್‌ಡಿಪಿಎಸ್ ಕಾಯ್ದೆ: ಬಂಧನ

ಕಾಸರಗೋಡು, ಏಪ್ರಿಲ್ 3: ಹಲವು ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೋಯಿಪ್ಪಾಡಿ ಮೂಲದ ವ್ಯಕ್ತಿಯನ್ನು ಪಿಟ್ ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ. ಕುಂಬಳೆ ಪೊಲೀಸರು ಕೋಯಿಪ್ಪಾಡಿ ಕಡಪ್ಪುರದ ಶಫೀರಾ ಮನ್ಸಿಲ್ ನಿವಾಸಿ ಕೆ.ಕೆ. ಸಾಧಿಕ್ (33) ಅವರನ್ನು ಬಂಧಿಸಿದ್ದು, ಇನ್‌ಸ್ಪೆಕ್ಟರ್ ಬೈಜು ಕೆ. ಥೋಮಸ್ ಹಾಗೂ ಎಸ್‌ಐಗಳಾದ ಸನಿತ್ ಮತ್ತು ಅನಂತಕೃಷ್ಣನ್ ಆರ್. ಮೆನನ್ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತನನ್ನು ಪೂಜಪ್ಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದ್ದು, ಮುಂದಿನ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ….

Read More

ಮುಳ್ಳೇರಿಯಾ, ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಸುರೇಶ್ ಗೋಪಿಯ ಭರ್ಜರಿ ಪ್ರಚಾರ

ಕಾಸರಗೋಡು: ಚುನಾವಣಾ ಕಣ ದಿನೇದಿನೇ ಕಾವೇರಿಸುತ್ತಿರುವ ಹಿನ್ನೆಲೆಯಲ್ಲಿ ಸುರೇಶ್ ಗೋಪಿ ಅವರು ಮುಳ್ಳೇರಿಯಾ ಹಾಗೂ ಕಾಸರಗೋಡು ಕಸಬಾ ಕಡಪ್ಪುರ ಪ್ರದೇಶಗಳಲ್ಲಿ ಭರ್ಜರಿ ರಾಜಕೀಯ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ ಅವರು, ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮುಳ್ಳೇರಿಯಾ ಮತ್ತು ಕಸಬಾ ಕಡಪ್ಪುರದಲ್ಲಿ ನಡೆದ ಸಭೆಗಳಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ…

Read More
error: Content is protected !!