Avatar

NAMMA MEDIA 24X7

ಮಕ್ಕಳೇ ಫನ್ ಸೈಕಲ್ ರೈಡ್ಗೆ ರೆಡಿಯಾಗಿ ಮಕ್ಕಳೇ …..! ಬರ್ತಿದ್ದೆ ಏಪ್ರಿಲ್ 6 ರಂದು ಪಿಲಿಕುಳ ಹೆರಿಟೇಜ್ ಹೌಸ್‌ನಲ್ಲಿ ಫನ್ ಸೈಕಲ್ ರೈಡ್ !

ಮಂಗಳೂರು: ಇಂದಿನ ಜನಾಂಗದ ಮಕ್ಕಳು ಹೆಚ್ಚಾಗಿ ಮೊಬೈಲ್ ಗುಂಗಲ್ಲೇ ಕಳೆಯುತ್ತಾರೆ ಅವರಿಗೆ ದೈಹಿಕ ಕ್ಷಮತೆ ಕಡಿಮೆ ಇರುತ್ತದೆ . ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಅಧಿಕವಾಗಬೇಕು ಎನ್ನುವ ನಿಟ್ಟಿನಲ್ಲಿ ಯುರೋಕಿಡ್ಸ್ ಕೊಡಿಯಾಲ್ ಬೈಲ್ ಸಂಸ್ಥೆ, ಮಂಗಳೂರು ಸೈಕಲ್ ಕೋ ಹಾಗೂ ಇನ್‌ಸ್ಟಾಗ್ರಾಂ ಸೈಕ್ಲಿಂಗ್ ಇನ್‌ಫ್ಲೂಯೆನ್ಸರ್ ಭಟ್ರು ಅವರ ಸಹಯೋಗದಲ್ಲಿ ಏಪ್ರಿಲ್ 6 ರಂದು ಬೆಳಿಗ್ಗೆ 9.00 ರಿಂದ 11.00 ಗಂಟೆಯವರೆಗೆ ಪಿಲಿಕುಳ ಹೆರಿಟೇಜ್ ಹೌಸ್‌ನಲ್ಲಿ ಫನ್ ಸೈಕಲ್ ರೈಡ್ ಕಾರ್ಯಕ್ರಮವನ್ನು 2 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಆಯೋಜಿಸಲಾಗಿದೆ…

Read More

ಕರಂಗಲ್ಪಾಡಿಯ ಕಾರ್ಣಿಕದ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದಲ್ಲಿ ಏಪ್ರಿಲ್.4ರಂದು ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ

ಮಂಗಳೂರು: ನಗರದ ಕರಂಗಲ್ಪಾಡಿಯ ಕಾರ್ಣಿಕದ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಏಪ್ರಿಲ್ 4 ಶನಿವಾರ ರಾತ್ರಿ ೮. ೩೦ ರಿಂದ ನಡೆಯಲಿದೆ ಎಂದು ಕರಂಗಲ್ಪಾಡಿಯ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದ ಪ್ರಧಾನ ಅರ್ಚಕರಾದ ಸುದನ್ ವಿದ್ಯಾನಗರ ಪಂಜಿಮುಗೇರು ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ…

Read More

ವರ್ಗೀಯ ರಾಜಕೀಯಕ್ಕೆ ಅಂತ್ಯ: ಮಂಜೇಶ್ವರದಲ್ಲಿ ಪಿ.ಎಂ.ಎ ಸಲಾಂ ಹೇಳಿಕೆ

ಮಂಜೇಶ್ವರಂ. ಕೇರಳದಲ್ಲಿ ವರ್ಗೀಯ ವಿಭಜನೆ ರಾಜಕೀಯಕ್ಕೂ ಹಾಗೂ ಎಡಪಂಥೀಯ ದುರಾಡಳಿತಕ್ಕೂ ಈ ಚುನಾವಣೆಯೊಂದಿಗೆ ಅಂತ್ಯಕಾಲ ಸಮೀಪಿಸಿದೆ ದ್ವೇಷ ಹರಡುವ ಮೂಲಕ ಯಾವಾಗಲೂ ಮತಗಳನ್ನುಗಳಿಸಬಹುದು ಎಂಬ ಬಿಜೆಪಿಯ ಭ್ರಮೆ ಮುಗಿದಿದೆ ಎಂದು ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಪಿ. ಎಂ. ಎ ಸಲಾಂ ಹೇಳಿದರು. ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎ .ಕೆ .ಎಂ . ಅಶ್ರಫ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಮೀಂಜ ಪಂಚಾಯತ್‌ನ ಗಾಂಧಿನಗರದಲ್ಲಿ ನಡೆದ ಕುಟುಂಬ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದ್ವೇಷವನ್ನು ಪ್ರಚೋದಿಸಿ…

Read More

ಗುಡ್ ಫ್ರೈಡೆ ಪ್ರಯುಕ್ತ ಇನ್ಫ್ಯಾಂಟ್ ಜೀಸಸ್ ಚರ್ಚ್ ವತಿಯಿಂದ ಶಿಲುಬೆಯ ಹಾದಿ

ಹೊಸಂಗಡಿ, ಗುಡ್ ಫ್ರೈಡೆ ಪ್ರಯುಕ್ತ ಇನ್ಫ್ಯಾಂಟ್ ಜೀಸಸ್ ಚರ್ಚ್ ವತಿಯಿಂದ ಭಕ್ತಿಭಾವದಿಂದ ಶಿಲುಬೆಯ ಹಾದಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಧಾರ್ಮಿಕ ಆಚರಣೆಯಲ್ಲಿ ಭಕ್ತರು ಯೇಸು ಕ್ರಿಸ್ತನ ಯಾತನೆ ಮತ್ತು ಶಿಲುಬೆಗೆ ಹಾಕಲ್ಪಟ್ಟ ಘಟನೆಗಳನ್ನು ಸ್ಮರಿಸಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಆವರಣದಿಂದ ಹೊಸಂಗಡಿ ದಾರಿಯುದ್ದಕ್ಕೂ ಶಿಲುಬೆಯ ಹಾದಿಯ ಹಂತಗಳನ್ನು ನಿರೂಪಿಸಲಾಗಿದ್ದು, ಭಕ್ತರು ಕ್ರಮವಾಗಿ ನಡೆದು ಪ್ರಾರ್ಥನೆ ನಡೆಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಈ ಮೂಲಕ ಯೇಸು ಕ್ರಿಸ್ತನ ತ್ಯಾಗ ಮತ್ತು ಮಾನವಕುಲಕ್ಕಾಗಿ ಮಾಡಿದ…

Read More

ಅಕ್ರಮ ಜಾನುವಾರು ಸಾಗಾಟ ಪತ್ತೆ: 19 ಜಾನುವಾರುಗಳು ವಶ, ಓರ್ವ ಬಂಧನ

ಕಡಬ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಡಬ ಠಾಣಾ ಪೊಲೀಸರು ಪತ್ತೆಹಚ್ಚಿ, ಅಮಾನುಷವಾಗಿ ಸಾಗಿಸಲಾಗುತ್ತಿದ್ದ 19 ಜಾನುವಾರುಗಳನ್ನು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡರು. ಕಡಬ ಸಮೀಪದ ಕನ್ವರೆ ಪ್ರದೇಶದಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಕಾರ್ಯಾಚರಣೆಯನ್ನು ಸಬ್‌ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ…

Read More

ಇಚ್ಚಿಲಂಗೋಡಿನಲ್ಲಿ ಇಸ್ಲಾಮಿಯ ಎ.ಎಲ್.ಪಿ. ಶಾಲೆಯ 80ನೇ ವಾರ್ಷಿಕೋತ್ಸವ ಏಪ್ರಿಲ್ 4ರಂದು

ಇಚ್ಚಿಲಂಗೋಡು, : ಎಂಟು ದಶಕಗಳ ಶಿಕ್ಷಣ ಪರಂಪರೆಯನ್ನು ಹೊಂದಿರುವ ಇಸ್ಲಾಮಿಯ ಎ.ಎಲ್.ಪಿ. ಶಾಲೆ ಇಚ್ಚಿಲಂಗೋಡಿನಲ್ಲಿ 80ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 4ರಂದು ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಬೀರೋಲಿಕ ಮೈದಾನದಲ್ಲಿ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಶಾಲೆಯ 80 ವರ್ಷಗಳ ಇತಿಹಾಸವನ್ನು ದಾಖಲಿಸಿದ ಸ್ಮರಣಿಕೆ (ಸೋವನೀರ್ ) ಬಿಡುಗಡೆ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ ನೆರವೇರಿದೆ ಎಂದು ಆಯೋಜಕರು ತಿಳಿಸಿದ್ದಾರೆ. ವಾರ್ಷಿಕೋತ್ಸವವನ್ನು ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ಟ ಉದ್ಘಾಟಿಸಲಿದ್ದಾರೆ. ಕುಂಬಳೆ ವಲಯದ ಸಿಐ ಬೈಜು ಕೆ. ಜೋಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ….

Read More

ಸಾಮರಸ್ಯದ ತೂಮಿನಾಡು: ದೈವಸ್ಥಾನದ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಯುವಕರಿಂದ ತಂಪು ಪಾನೀಯ ಸೇವೆ

ಮಂಜೇಶ್ವರ: ಜಾತಿ-ಧರ್ಮಗಳ ಹೆಸರಿನಲ್ಲಿ ದ್ವೇಷದ ಕಿಡಿ ಹರಡುತ್ತಿರುವ ಇಂದಿನ ಕಾಲಘಟ್ಟದಲ್ಲಿ, ತೂಮಿನಾಡಿನ ಮುಸ್ಲಿಂ ಯುವಕರು ಮಾನವೀಯತೆ ಮತ್ತು ಸೌಹಾರ್ದತೆಯ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದ್ದಾರೆ. ತೂಮಿನಾಡು ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮೊಸರು ವಿತರಿಸುವ ಮೂಲಕ ಈ ಯುವಕರು ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.​ಗುರುವಾರದಿಂದ ಆರಂಭವಾಗಲಿರುವ ಬ್ರಹ್ಮಕಲಶ ಹಾಗೂ ವರ್ಷಾವಧಿ ನೇಮೋತ್ಸವದ ಹಿನ್ನೆಲೆಯಲ್ಲಿ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಭಕ್ತರಿಗೆ, ಸ್ಥಳೀಯ…

Read More

ಪ್ರಜಾಪ್ರಭುತ್ವದ ‘ಬಿಕರಿ’ ಮತ್ತು ಮತದಾರನ ಅಂತರಾತ್ಮದ ‘ಮುಷ್ಕರ’

​ನಮ್ಮ ದೇಶದ ಪ್ರಜಾಪ್ರಭುತ್ವ ಇಂದು ಒಂದು ವಿಚಿತ್ರ ತಿರುವಿನಲ್ಲಿ ಬಂದು ನಿಂತಿದೆ. ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯನ್ನು ನಾವು ಸಂವಿಧಾನದ ‘ಹಬ್ಬ’ ಎಂದು ಸಂಭ್ರಮಿಸಬೇಕೋ ಅಥವಾ ಮೌಲ್ಯಗಳ ‘ಸಂತೆ’ ಎಂದು ಹೀಯಾಳಿಸಬೇಕೋ ಎಂಬುದು ಇಂದಿನ ಜ್ವಲಂತ ಪ್ರಶ್ನೆ. ಗದ್ದೆಗಳಲ್ಲಿ ನೇಗಿಲು ಹಿಡಿದು, ಮಣ್ಣಿನ ಘಮಲಿನಲ್ಲಿ ಬದುಕು ಕಾಣುವ ರೈತನಿಗೆ ಬೀಜದ ಗುಣ ಎಷ್ಟು ಮುಖ್ಯವೋ, ಪ್ರಜಾಪ್ರಭುತ್ವದ ಸುಂದರ ಫಸಲಿಗೆ ಮತದಾರನ ವಿವೇಚನೆಯೂ ಅಷ್ಟೇ ಮುಖ್ಯ. ಆದರೆ, ಇಂದು ಮತದಾರನ ಆ ವಿವೇಚನೆ ಆಮಿಷಗಳ ಮಳೆಯಲ್ಲಿ ಪೂರ್ತಿಯಾಗಿ ತೋಯ್ದು…

Read More

ಮೀಂಜ–ಮಂಗಲ್ಪಾಡಿ ಸಂಪರ್ಕ ಸೇತುವೆ ನಿರ್ಲಕ್ಷ್ಯ: ಸ್ಥಳ ಪರಿಶೀಲಿಸಿದ ಸುರೇಂದ್ರನ್

ಮಂಜೇಶ್ವರ, ಏಪ್ರಿಲ್ 3: ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದರೂ ಇನ್ನೂ ಮರುನಿರ್ಮಾಣವಾಗದ ಮೀಂಜ–ಮಂಗಲ್ಪಾಡಿ ಸಂಪರ್ಕದ ದೇರಂಬಳ ಸೇತುವೆಯನ್ನು Bharatiya Janata Party (ಬಿಜೆಪಿ) ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಂದ್ರನ್ ಕೆ. ಭೇಟಿ ನೀಡಿ ವೀಕ್ಷಿಸಿದರು. ಸ್ಥಳ ಪರಿಶೀಲಿಸಿದ ವೇಳೆ ಮಾತನಾಡಿದ ಅವರು, ಸೇತುವೆ ಕುಸಿದು ನಾಲ್ಕು ವರ್ಷ ಕಳೆದರೂ ಪುನರ್ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸ್ಥಳೀಯ ಜನರು ಸಂಚಾರದ ತೊಂದರೆ ಅನುಭವಿಸುತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….

Read More

ಕೊಳ್ನಾಡು ಆರೋಗ್ಯ ಸೇವೆಗೆ ಹೊಸ ಚೈತನ್ಯ: ಕುಡ್ತಮುಗೇರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹30 ಲಕ್ಷ ಅನುದಾನ ಮಂಜೂರು

ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಪ್ರಾಥಮಿಕ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಎಂ.ಆರ್.ಪಿ.ಎಲ್ CSR ನಿಧಿಯಿಂದ ₹30 ಲಕ್ಷ ಅನುದಾನ ಮಂಜೂರಾಗಿದೆ. ವಿಧಾನಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಅವರ ಶಿಪಾರಸ್ಸಿನ ಮೇರೆಗೆ ಈ ಅನುದಾನ ಬಿಡುಗಡೆಯಾಗಿದ್ದು, ಸ್ಥಳೀಯ ಜನರಲ್ಲಿ ಅಪಾರ ಸಂತೋಷ ಮೂಡಿಸಿದೆ. ಈ ಮೂಲಕ ಹಲವು ವರ್ಷಗಳಿಂದ ಕಟ್ಟಡದ ಕೊರತೆಯಿಂದ ಬಳಲುತ್ತಿದ್ದ ಆರೋಗ್ಯ ಕೇಂದ್ರಕ್ಕೆ ಹೊಸ ಜೀವ ಬಂದಿದೆ. ಈ ಕೇಂದ್ರದ ಸ್ಥಾಪನೆಗಾಗಿ ಹಿಂದಿನಿಂದಲೂ ಶ್ರಮಿಸುತ್ತಿದ್ದ ಕೊಳ್ನಾಡು ಗ್ರಾಮ ಪಂಚಾಯತ್…

Read More
error: Content is protected !!