Avatar

NAMMA MEDIA 24X7

ನೇತ್ರಾವತಿ ನದಿಯಲ್ಲಿ ಗುರುತಿಸಲಾಗದ ಗಂಡಸಿನ ಶವ ಪತ್ತೆ

ಪುತ್ತೂರು: ನೇತ್ರಾವತಿ ನದಿಯಲ್ಲಿ ಗುರುತಿಸಲಾಗದ ಗಂಡಸಿನ ಶವ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.34 ನೆಕ್ಕಿಲಾಡಿಯ ಮಸೀದಿ ಹಿಂಭಾಗದ ನೇತ್ರಾವತಿ ನದಿಯಲ್ಲಿ ಗಿಡಗಂಟೆಗಳ ನಡುವೆ ಸಿಲುಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸ್ಥಳೀಯರು ಶವವನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತದೇಹವು ಮೇಲ್ಭಾಗದ ಪ್ರದೇಶದಿಂದ ತೇಲಿ ಬಂದಿರುವ ಸಾಧ್ಯತೆ ಇರುವುದಾಗಿ ಅನುಮಾನ ವ್ಯಕ್ತವಾಗಿದೆ. ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ…

Read More

ಪುತ್ತೂರಿನಲ್ಲಿ ದಲಿತ ನಿಂದನೆ ಆರೋಪ ತಳ್ಳಿ ಹಾಕಿದ ಕಾಂಗ್ರೆಸ್ ಎಸ್‌ಸಿ ಘಟಕ; ಅಶೋಕ್ ರೈ ವಿರುದ್ಧದ ಆರೋಪ ರಾಜಕೀಯ ಪ್ರೇರಿತವೆಂದ ಬಾಬು ಮರಿಕೆ

ಪುತ್ತೂರು: ವಿಧಾನ ಪರಿಷತ್ ವಿರೋಧÀ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಉಪ್ಪಿನಂಗಡಿಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ರಾಜಕೀಯ ಹೇಳಿಕೆ ನೀಡಿ ಲೇವಡಿ ಮಾಡಿದ್ದರು. ಇದಕ್ಕೆ ಶಾಸಕರು ಕೂಡ ರಾಜಕೀಯ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಎಲ್ಲೂ ಕೂಡ ಅವರು ದಲಿತ ಸಮುದಾಯವನ್ನು ನಿಂದಿಸುವ ಹೇಳಿಕೆ ನೀಡಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಎಸ್‌ಸಿ ಘಟಕ ಹೇಳಿದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಶೋಕ್ ರೈ…

Read More

ಪುತ್ತೂರು ಹಾರಾಡಿ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ

ಪುತ್ತೂರು: ಪುತ್ತೂರು ಹಾರಾಡಿ ರೈಲ್ವೇ ಹಳಿಯಲ್ಲಿ ಫೆಬ್ರವರಿ 20ರಂದು ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಹಳಿಯ ಬಳಿ ಶವ ಪತ್ತೆಯಾಗಿರುವುದನ್ನು ಗಮನಿಸಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ.ಈ ಕುರಿತು ಪ್ರಕರಣ…

Read More

ಕಾರ್ಕಳ: ಮನೆಯಲ್ಲಿ ಕುಸಿದುಬಿದ್ದು ಯುವಕ ಮೃತ್ಯು

ಉಡುಪಿ: ಮನೆಯಲ್ಲಿ ಕುಳಿತಿದ್ದ ಯುವಕನೋರ್ವ ದಿಢೀರ್ ಆಗಿ ಕುಸಿದುಬಿದ್ದು ಮೃತಪಟ್ಟ ಘಟನೆ ಫೆ. 19ರಂದು ಕಾರ್ಕಳ ತಾಲೂಕಿನ ಎರ್ಲಪಾಡಿಯಲ್ಲಿ ನಡೆದಿದೆ. ಎರ್ಲಪಾಡಿಯ ನಿವಾಸಿ ಸುಹೇಶ್ ಕುಮಾರ್ (22) ಮೃತಪಟ್ಟ ಯುವಕ. ಇವರು 15 ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು. ಗುರುವಾರ ಮನೆಯಲ್ಲಿ ಕುಳಿತಿದ್ದವರು ಒಮ್ಮೇಲೆ ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸುಹೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ‌. ಈ ಬಗ್ಗೆ ಕಾರ್ಕಳ ನಗರ…

Read More

ಉಡುಪಿ ಶ್ರೀಕೃಷ್ಣಮಠಕ್ಕೆ ಚಿತ್ರನಟಿ ಭಾರತಿ ವಿಷ್ಣುವರ್ಧನ್ ಭೇಟಿ

ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಖ್ಯಾತ ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರು ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಳಿಕ ಪರ್ಯಾಯ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಫಲ ಮಂತ್ರಾಕ್ಷತೆಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು.

Read More

ಉಚಿತ ಕಣ್ಣು ತಪಾಸಣಾ ಶಿಬಿರ ಫೆ.22ರಂದು

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಲ್ಲಿ ಕಾಸರಗೋಡಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಕಾರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಫೆ.22ರಂದು ಬೆಳಗ್ಗೆ 10ರಿಂದ ಕನ್ನಡ ಭವನದಲ್ಲಿ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಬಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಕೌನ್ಸಿಲರ್ ಆಗಿರುವ ಶ್ರುತಿ ಅಶೋಕನಗರ, ಶಾರದಾ ಜೆ. ಪಿ. ನಗರ, ಸುಧಾರಾಣಿ ಶರತ್ ಅಣಂಗೂರು, ನೇತಾಜಿ ರೆಸಿಡೆನ್ಸಿ ವಲಯ ಅಧ್ಯಕ್ಷ…

Read More

ಮಂಜೇಶ್ವರದಲ್ಲಿ ತೀಯಾ ಸಮುದಾಯ ಒಗ್ಗಟ್ಟಿಗೆ ಮಹತ್ವದ ಸಭೆ

ಮಂಜೇಶ್ವರ :ಸುಮಾರು ಹದಿನೆಂಟು ಶ್ರೀ ಭಗವತಿ ಕ್ಷೇತ್ರದ ತೀಯಾ ಸಮುದಾಯವನ್ನು ಒಗ್ಗಟ್ಟು ಮಾಡುವ ಅಂಗವಾಗಿ ಬಂದಿಯೋಡು ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೃಷ್ಣ ಕಾರ್ನೋರ್ ಅವರನ್ನು ತೀಯಾ ವೆಲ್ಫೇರ್ ಸೊಸೈಟಿ ಸದಸ್ಯರು ತೀಯಾ ಸಮುದಾಯಕ್ಕೆ ಕೇರಳ ಸರಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು ಈ ಸಂದರ್ಭದಲ್ಲಿ ತೀಯಾ ಕ್ಷೆಮಾಸಭಾ ಅಧ್ಯಕ್ಷರಾದ ರವಿ ಕುಲ್ನಗರೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ತೀಯಾ ವೆಲ್ಫೇರ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ನಾಗೇಶ್ ಕುಂಬುಳೆ ತೀಯಾ…

Read More

ಮಂಗಳೂರು ಮಹಾನಗರ ಪಾಲಿಕೆ 50ನೇ ಅಳಪೆ ದಕ್ಷಿಣ ವಾರ್ಡಿನಲ್ಲಿ ₹40 ಲಕ್ಷ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಬೊಲ್ಲಗುಡ್ಡೆ ಉಷಾ ಮನೆಯಿಂದ ಸತೀಶ್‌ ಮನೆಯವರೆಗೆ ಸ್ಥಳೀಯರ ಮನವಿಯಂತೆ ರೂ. 40ಲಕ್ಷ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಶೋಭಾ ಪೂಜಾರಿ ಹಾಗೂ ಮಂಡಲದ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ…

Read More

ಸರಕಾರಿ ಆರೋಗ್ಯ ವಲಯದ ಸುಧಾರಿತ ಸೇವಾ ಸೌಲಭ್ಯಗಳ ಪ್ರಚಾರಕ್ಕೆ ಸಾಕ್ಷ್ಯಚಿತ್ರದ ಅಭಿಯಾನ

ಕುಂಬಳೆ: ವೖಬ್ 4 ವೖಲ್ಸ್ ಹೆಲ್ತ್ ಕೇರಳ ಅಭಿಯಾನ ವಾಹನ ಪ್ರಚಾರಕ್ಕೆ ಶುಕ್ರವಾರ ಬೆಳಿಗ್ಗೆ ಕುಂಬಳೆ ಗ್ರಾ. ಪಂ. ನಲ್ಲಿ ಸ್ವಾಗತ ನೀಡಲಾಯಿತು. ಕೇರಳ ಸರಕಾರ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತಂದ ಆರೋಗ್ಯ ಯೋಜನೆ ಮತ್ತು ಸೌಲಭ್ಯಗಳ ಪ್ರಚಾರದಂಗವಾದ ವಾಹನ ಪ್ರಚಾರ ಕುಂಬಳೆ ಗ್ರಾ. ಪಂ. ಅಂಗಣಕ್ಕೆ ಪ್ರವೇಶಿಸಿದಾಗ ಸ್ವಾಗತ ನೀಡಿ ಪಂ. ಅಧ್ಯಕ್ಷ ವಿ. ಪಿ. ಅಬ್ದುಲ್ ಖಾದರ್ ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪಿ. ಖಾಲಿದ್ ಬಂಬ್ರಾಣ ಅಧ್ಯಕ್ಷತೆ…

Read More

ಕಂಠರರ್ ರಾಜೀವರ್ ವಿರುದ್ಧ ಪುರಾವೆ ಇಲ್ಲ: ತನಿಖೆಯಲ್ಲಿ ಸಂಯಮ ಅಗತ್ಯ –ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಕಾಸರಗೋಡು:ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಚಿನ್ನ ಹಗರಣ ಪ್ರಕರಣದಲ್ಲಿ ದೇವಾಲಯದ ತಂತ್ರಿಯಾಗಿರುವ ಕಂಠರರ್ ರಾಜೀವರ್ ಅವರಿಗೆ ಮಾನ್ಯ ನ್ಯಾಯಾಲಯ ಜಾಮೀನು ನೀಡಿದ್ದು, ಅವರ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದನ್ನು ಸಚ್ಚಿದಾನಂದ ಭಾರತಿ ಸ್ವಾಮಿಗಳು ಸ್ವಾಗತಿಸಿದ್ದಾರೆ. ಅವರು ಈ ಬಗ್ಗೆ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹಿಂದೂ ದೇವಾಲಯ ಪರಂಪರೆಯ ರಕ್ಷಕರಾಗಿರುವ ತಂತ್ರಿಗಳು ಕೇವಲ ವ್ಯಕ್ತಿಗಳಷ್ಟೇ ಅಲ್ಲ; ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದ ದೈವಿಕ ಹಾಗೂ ಅಧ್ಯಾತ್ಮಿಕ ಜವಾಬ್ದಾರಿಯ ಪ್ರತೀಕರಾಗಿದ್ದಾರೆ. ಅಂಥ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಾಕ್ಷ್ಯ…

Read More
error: Content is protected !!