ಸವಿತಾ ಪುಂಡೂರು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕಿಯಾಗಿ ಖಾಯಂ ನೇಮಕ
ಕಾಸರಗೋಡು : ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾಗಿ ಕನ್ನಡಿಗತಿ ಸವಿತಾ ಪುಂಡೂರು ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ.ಇಲ್ಲಿಯವರೆಗೆ ಅವರು ಈ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿದ್ದು, ನವೆಂಬರ್ 13 ರಂದು ಅಧಿಕೃತವಾಗಿ ತಮ್ಮ ಕರ್ತವ್ಯವನ್ನು ಸ್ವೀಕರಿಸಲಿದ್ದಾರೆ. 1997ರಲ್ಲಿ ಅಧ್ಯಾಪಕಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಉಪ್ಪಳ, ಕುಂಬಳೆ, ಮೊಗ್ರಾಲ್ ಪುತ್ತೂರು ಹಾಗೂ ಇಡುಕ್ಕಿ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಸಹಾಯಕ ಶಿಕ್ಷಣಾಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಮಧೂರು ನಿವಾಸಿಯಾಗಿರುವ ಇವರು, ನೀಚಾರ್ಲು ಮಾ. ಸಂ. ಕಾಲೇಜು ಹೈಸ್ಕೂಲಿನ…
