Avatar

NAMMA MEDIA 24X7

ಅಕ್ರಮ ಗೋವಧೆ ಆರೋಪ: ಕಡಬದಲ್ಲಿ ಮೂವರ ಬಂಧನ

ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ತಯಾರಿಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಘಟನೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ‌ ನಡೆದಿದೆ. ಅಕ್ರಮ ಗೋವಧೆ ನಡೆಯುತ್ತಿರುವ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಕಡಬ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ತೋಟವೊಂದರಲ್ಲಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ದಾಳಿ ನಡೆಸಿ ಮೂವರನ್ನು ಹಿಡಿದು ವಿಚಾರಿಸಲಾಯಿತು. ಬಂಧಿತರನ್ನು ಕೆ ಅಬ್ದುಲ್‌‌ ರಫೀಕ್‌‌(37), ಅದ್ರಾಮ ಮಂತೂರು(41) ಮತ್ತು ಅಬ್ದುಲ್‌…

Read More

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಭೇಟಿ; ವಿಶೇಷ ಪೂಜೆ ಸಲ್ಲಿಕೆ

ದೇಶದ ಉಪರಾಷ್ಟ್ರಪತಿ ಪಿ.ರಾಧಾಕೃಷ್ಣನ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಿದ ಉಪ ರಾಷ್ಟ್ರಪತಿ ಬಳಿಕ ಕ್ಷೇತ್ರದ ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿದರು. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದ ಉಪ ರಾಷ್ಟ್ರಪತಿ, ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ…

Read More

ಶಿಸ್ತು, ಪಾಂಡಿತ್ಯದ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರು ಡಾ. ರಮಾನಂದ ಬನಾರಿ: ಡಾ. ಪುರುಷೋತ್ತಮ ಬಿಳಿಮಲೆ

ನೀರ್ಚಾಲು: ಯಕ್ಷಗಾನ, ತಾಳಮದ್ದಳೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಕವಿ ಮತ್ತು ಅರ್ಥಧಾರಿ ಡಾ. ರಮಾನಂದ ಬನಾರಿ ಅವರ 85ನೇ ಜನ್ಮವರ್ಷದ ಅಭಿನಂದನಾ ಸಮಾರಂಭ, ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಕನ್ನಡ ಸಾಹಿತ್ಯ–ಸಂಸ್ಕೃತಿ ಸಮ್ಮೇಳನವು ರವಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ವೈಭವದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ವೈದ್ಯಕೀಯ ವೃತ್ತಿಯಲ್ಲಿ ಅಗತ್ಯವಾದ ಶಿಸ್ತು ಮತ್ತು ನಿಷ್ಠೆಯನ್ನು ಯಕ್ಷಗಾನ, ತಾಳಮದ್ದಳೆ ಹಾಗೂ ಸಾಹಿತ್ಯ…

Read More

DYFI ಕುಳೂರು ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

ಕುಳೂರು, ಜೂನ್ 1: DYFI ಕುಳೂರು ಯೂನಿಟ್ ಸಮಿತಿಯ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶರ್ಮಿಳಾ ಎಂ. ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಲೇಜ್ ಕಾರ್ಯದರ್ಶಿ ಉದಯ್ CH, ಬ್ಲಾಕ್ ಜಂಟಿ ಕಾರ್ಯದರ್ಶಿ ಪದ್ಮಜಾ ಹಾಗೂ ಬ್ರಾಂಚ್ ಕಾರ್ಯದರ್ಶಿ ದಯಾನಂದ ಕುಳೂರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಲೇಜ್ ಸಮಿತಿ ಸದಸ್ಯ ಪ್ರವೀಣ್ ಸ್ವಾಗತಿಸಿದರು. ಯೂನಿಟ್ ಅಧ್ಯಕ್ಷ ಪ್ರಜ್ವಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ SSLC ಹಾಗೂ ದ್ವಿತೀಯ ಪಿಯುಸಿ (+2) ಪರೀಕ್ಷೆಗಳಲ್ಲಿ…

Read More

ಇರಾನ್ ಅಧ್ಯಕ್ಷರ ರಾಜೀನಾಮೆ ಸುದ್ದಿ ಸಂಚಲನ: ಖಮೇನಿ ಕಚೇರಿಗೆ ಪತ್ರ ಸಲ್ಲಿಕೆ ವರದಿ

ಟೆಹ್ರಾನ್: ಇರಾನ್ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ದೇಶದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗೆ ಸಲ್ಲಿಸಿದ್ದಾರೆ ಎಂದು ‘ಇರಾನ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಅತಿಯಾದ ಹಸ್ತಕ್ಷೇಪ ನಡೆಸುತ್ತಿರುವುದೇ ರಾಜೀನಾಮೆ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇರಾನ್‌ನ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ದೇಶದ ಆಡಳಿತ…

Read More

ಇಂದಿನಿಂದ 61 ದಿನ ಮತ್ಸ್ಯ ಗಾರಿಕೆಗೆ ಬ್ರೇಕ್: ಯಾಂತ್ರೀಕೃತ ಬೋಟ್‌ಗಳ ಸಂಚಾರ ಸ್ಥಗಿತ

ಮಂಗಳೂರು:ಪಶ್ಚಿಮ ಕರಾವಳಿಯುದ್ದಕ್ಕೂ ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಜಾರಿಯಾಗಿದ್ದು, ಇದರೊಂದಿಗೆ ಮೀನುಗಾರಿಕೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಳ್ಳಲಿವೆ. ಮೀನುಗಳ ಸಂತಾನೋತ್ಪತ್ತಿ ಅವಧಿಯನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಬಂಧವನ್ನು ಜಾರಿಗೊಳಿಸಿದೆ. ಮಳೆಗಾಲವು ಹೆಚ್ಚಿನ ಕಡಲ ಪ್ರಭೇದಗಳ ಸಂತಾನೋತ್ಪತ್ತಿಯ ಪ್ರಮುಖ ಕಾಲವಾಗಿದ್ದು, ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳ ಕಾರ್ಯಾಚರಣೆಯಿಂದ ಮೀನುಗಳ ಮೊಟ್ಟೆ ಇಡುವಿಕೆ ಹಾಗೂ ಬೆಳವಣಿಗೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದ ಮೀನು ಸಂಪತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸರ್ಕಾರ…

Read More

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 10 ರಂದು ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ “ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ” ಪ್ರದಾನ

ಕರ್ನಾಟಕ ರಾಜಧಾನಿಯ ಹಿರಿಯ ಸಂಘಟನೆಯಾದ ವಿ. ಕೆ. ಎಂ. ಕಲಾವಿದರು(ರಿ.), ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ನಡೆಯುವ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾo ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳ – ರಂಗೋತ್ಸವ ಮತ್ತು ನಿರಂತರ 45ನೇ ವರ್ಷದ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2026 ಜೂನ್ 8 ರಿಂದ 10 ರ ತನಕ ನಡೆಯಲಿದೆ. ಇದರ ಸಮಾರೋಪ ಸಮಾರಂಭವು ಜೂನ್ 10…

Read More

ಪಣೋಲಿಬೈಲು ಕ್ಷೇತ್ರಕ್ಕೆ ಭಕ್ತರ ಮಹಾಪೂರ; 4,180 ಅಗೇಲು ಸೇವೆ ಸಂದಾಯ

ಬಂಟ್ವಾಳ: ಕೋಲ ಹಾಗೂ ಅಗೇಲು ಸೇವೆಗೆ ಪ್ರಸಿದ್ದಿ ಪಡೆದಿರುವ ಆರಾಧನಾ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ರವಿವಾರ ಭಕ್ತರಿಂದ 4180 ಅಗೇಲು ಸೇವೆಗಳು ಸಂದಾಯವಾಗಿದೆ; ಇದು ಈ ವರ್ಷದಲ್ಲಿ ಸಂದಾಯವಾದ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ. ಹೆಚ್ಚು ಸೇವೆ ಸಂದಾಯವಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಕ್ಷೇತ್ರದಲ್ಲಿ ವಾರದಲ್ಲಿ ಮೂರು ದಿನ ಅಗೇಲು ಸೇವೆ ಸಂದಾಯವಾಗುತ್ತಿದ್ದರೂ ರವಿವಾರ ರಜಾ ದಿನವಾದ ಕಾರಣ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಗೇಲು ಸೇವೆ ಸಲ್ಲಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ…

Read More

ಉಡುಪಿಯಲ್ಲಿ ಭೀಕರ ಅಪಘಾತ: ಲಾರಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ, ಚಾಲಕ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಸಮೀಪ ಸರಕು ಸಾಗಾಟದ ಲಾರಿಗೆ ಹಿಂಬದಿಯಿಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ.ಮೃತರನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಪಿ. (29) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಟೆಂಪೋದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ.ಅಪಘಾತದ ಬಳಿಕ ಟೆಂಪೋದಲ್ಲಿ ಸಿಲುಕಿದ್ದ ಚಾಲಕನ ಮೃತದೇಹವನ್ನು ಹೊರತೆಗೆಯಲು ಸಾಕಷ್ಟು ಹರಸಾಹಸ…

Read More

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತ ಸಾಗರ: ಒಂದೇ ದಿನ 30 ಸಾವಿರಕ್ಕೂ ಅಧಿಕ ಭಕ್ತರ ದರ್ಶನ

ದಕ್ಷಿಣ ಭಾರತದ ಹೆಸರಾಂತ ನಾಗರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ರವಿವಾರ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ 30,000 ಕ್ಕಿಂತಲೂ ಅಧಿಕ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ,ತೀರ್ಥ ಪ್ರಸಾದ ಹಾಗೂ ಭೋಜನ ಸ್ವೀಕರಿಸಿರುವರು. ಮುಂಜಾನೆಯಿಂದಲೇ ಪವಿತ್ರ ತೀರ್ಥ ಸ್ನಾನಕ್ಕಾಗಿ ಕುಮಾರಧಾರ ಸ್ನಾನ ಘಟ್ಟದಲ್ಲಿ ಭಕ್ತರು ಮಿಂದು ಶ್ರೀ ದೇವಳದ ಹೊರಾಂಗಣ ಪ್ರವೇಶಿಸಿ ಸರತಿಯ ಸಾಲಿನಲ್ಲಿ ಶ್ರೀ ದೇವರ ದರ್ಶನ ಮಾಡಿರುವರು. ಭಕ್ತರಿಗೆ ಲಡ್ಡು ಪ್ರಸಾದ ಹಾಗೂ ಪಂಚಕಜ್ಜಾಯ ತೀರ್ಥ ಬಾಟಲಿ ಇತ್ಯಾದಿಗಳಿಗಾಗಿ ಶ್ರೀ ದೇವಳದ…

Read More
error: Content is protected !!