Avatar

NAMMA MEDIA 24X7

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟಿರುವ ಹೆಸರುಗಳನ್ನು ಪರಿಶೀಲಿಸಿ: ಕಾಂಗ್ರೆಸ್ ಬಿಎಲ್‌ಎಗಳಿಗೆ ಹರೀಶ್ ಕುಮಾರ್ ಕರೆ

ಮಂಗಳೂರು: ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳು ಹಾಗೂ ಮತದಾರರ ವಿವರಗಳಲ್ಲಿರುವ ವ್ಯತ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕರೆ ಅವರು ಕಾಂಗ್ರೆಸ್ ಬಿಎಲ್‌ಎಗಳಿಗೆ ಕರೆ ನೀಡಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಿಎಲ್‌ಎಗಳು ಹಾಗೂ ಕ್ಷೇತ್ರದ ಸಂಯೋಜಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಪ್ರದೇಶಗಳಲ್ಲಿ ಮತದಾರರ ಹೆಸರುಗಳಲ್ಲಿ…

Read More

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಸ್ಪಂದನೆ:-ರಾಷ್ಟ್ರಕವಿ “ಗಿಳಿವಿಂಡು” ಸಮುಚ್ಚಯದ ದುರಸ್ತಿ ಕಾಮಗಾರಿಗೆ ಚಾಲನೆ, ಒಂದು ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಮನವಿ

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹೆಸರಿನ ಕೇರಳ- ಕರ್ನಾಟಕ ಸರಕಾರದ ಜಂಟಿ ಟ್ರಸ್ಟ್ ಸಮಿತಿ ಪುನರ್ ರಚಿಸಲು ಆಗ್ರಹ, ಸುದ್ದಿ ಪ್ರಕಟಿಸಿದ ಮಾಧ್ಯಮದವರಿಗೆ ಕೃತಜ್ಞತೆಗಳು. ಕನ್ನಡದ ಪ್ರಥಮ ರಾಷ್ಟ್ರಕವಿ ಎಂದೇ ಪ್ರಸಿದ್ಧರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ಹುಟ್ಟೂರು ಸದ್ಯ ಕೇರಳದಲ್ಲಿರುವ ಮಂಜೇಶ್ವರದ “ರಾಷ್ಟ್ರಕವಿ ನಿವಾಸ”ಕ್ಕೆ,ಅಂತರರಾಷ್ಟ್ರೀಯ ಬಹುಭಾಷಾ ವಿದ್ವಾಂಸ, ಸಾಂಸ್ಕೃತಿಕ ರಾಯಭಾರಿ ,ಎಲ್. ಜಿ.ಜ್ಯೋತೀಶ್ವರ ಬೆಂಗಳೂರು ಅವರು 2026 ಜೂನ್ 2ರಂದು ಮಂಜೇಶ್ವರದ ರಾಷ್ಟ್ರಕವಿ ನಿವಾಸ “ಗಿಳಿವಿಂಡು”ವಿಗೆ ಆಗಮಿಸಿ, ರಾಷ್ಟ್ರ ಮರೆತಿರುವ ರಾಷ್ಟ್ರ ಕವಿಯ ಸ್ಮಾರಕ…

Read More

ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

ಮಂಗಳೂರು: ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗುರುಪುರ-ಉಳಾಯಿಬೆಟ್ಟು ನಿವಾಸಿ ಮೊಹಮ್ಮದ್ ಇಮ್ರಾನ್ (36) ಬಂಧಿತ ಆರೋಪಿ. ಈತನ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 10/2020ನೇ ಪ್ರಕರಣದಲ್ಲಿ ಐಪಿಸಿ ಕಲಂ 376 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಸಿ.ಸಿ. ನಂ. 2225/2021ರಲ್ಲಿ ಆರೋಪಿಯ ವಿರುದ್ಧ ವಾರೆಂಟ್ ಬಾಕಿ ಇತ್ತು. ಸುಮಾರು ಆರು ವರ್ಷಗಳಿಂದ ಪೊಲೀಸರ…

Read More

ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ: ಮೂವರಿಗೆ ಸುಟ್ಟ ಗಾಯ

ಮಿಜಾರ್: ಬಾಡಿಗೆ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸುಟ್ಟ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಮಿಜಾರ್ ಬಳಿ ನಡೆದಿದೆ. ಬೆಳಗ್ಗೆ ಸುಮಾರು 6:30ರ ವೇಳೆಗೆ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಆಳ್ವಾಸ್ ಕಾಲೇಜಿನ ವಾಚ್‌ಮ್ಯಾನ್ ಶಿವರಾಮ (31), ಅವರ ಪತ್ನಿ ಗಂಗಾ (25) ಹಾಗೂ ಪುತ್ರ ಆದರ್ಶ್ (6) ಅವರಿಗೆ ಸುಟ್ಟ ಗಾಯಗಳಾಗಿವೆ. ಸ್ಫೋಟದ ಪರಿಣಾಮ ಶಿವರಾಮ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಪತ್ನಿ ಹಾಗೂ ಮಗನಿಗೂ ಗಾಯಗಳಾಗಿವೆ. ಘಟನೆಯ ಕುರಿತು ಹೆಚ್ಚಿನ…

Read More

ಕುಂಬಳೆಯಲ್ಲಿ ಸಚಿವರ ಕಾರ್ಯಕ್ರಮದ ಗೇಟ್ ತಡೆ: ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲು

ಮಂಜೇಶ್ವರ : ಕುಂಬಳೆ ಜಿ.ಎಸ್.ಬಿ.ಎಸ್. ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ಸಚಿವರು ಭಾಗವಹಿಸುತ್ತಿದ್ದ ವೇಳೆ, ವೇದಿಕೆಯ ಸಮೀಪ ಗದ್ದಲ ಉಂಟುಮಾಡಿ ಪ್ರವೇಶ ದ್ವಾರವನ್ನು ತಡೆದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ 10 ಜನರ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಾಗಿದೆ. ​ಎಸ್.ಐ. ಕೆ.ಪಿ. ಗಣೇಶ್ ಅವರ ದೂರಿನ ಮೇರೆಗೆ ಎಂ.ಎಲ್. ಅಶ್ವಿನಿ ಹಾಗೂ ಇತರ ಪ್ರಮುಖರಾದ ಅಶ್ವಿನ್ ಅಜಿತ್ ಕುಮಾರ್, ಪಿ.ಆರ್….

Read More

ಮಂಗಳೂರಿನಲ್ಲಿ ದಾರುಣ ಘಟನೆ: ಗಲ್ಫ್‌ನಿಂದ ಬಂದ ಯುವಕ ಲಾಡ್ಜ್‌ನಲ್ಲಿ ಶವವಾಗಿ ಪತ್ತೆ

ಮಂಗಳೂರು: ಸಹೋದರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಮಾಸುವ ಮುನ್ನವೇ, ಆಕೆಯ ಸಹೋದರನೂ ಮಂಗಳೂರಿನ ಲಾಡ್ಜ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಕೇರಳದ ಬೇಕಲ್ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಮೃತ ಯುವಕ. ಕಳೆದ ಜೂನ್‌ನಲ್ಲಿ ಅರ್ಜುನ್ ಅವರ ಸಹೋದರಿ ಐಜಾ ಆರ್. ಮಹೇಶ್ ಅವರು ತರಬೇತಿ ಕೇಂದ್ರದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಮರು ಪರೀಕ್ಷೆಯ ಸಿದ್ಧತೆಯಲ್ಲಿದ್ದ ಐಜಾ ಮಾನಸಿಕ ಒತ್ತಡದಿಂದ ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿತ್ತು. ತಂಗಿಯ ಸಾವಿನ…

Read More

ಮಾನವತೆ ಸಂದೇಶ ಸಾರುವ ಸಂತ ರವಿ ದಾಸರ ಚಿಂತನೆ

ಸಂತ ರವಿದಾಸರ 650ನೇ ಜನ್ಮ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘವು (KRMSS), ದಕ್ಷಿಣ ಕನ್ನಡ ಜಿಲ್ಲೆ ಘಟಕ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬೈಕಂಪಾಡಿ (ಮುಸ್ಲಿಂ), ಅಂಗಾರ್ಗುಂಡಿ ಕ್ಲಸ್ಟರ್ ಸಂಯುಕ್ತ ಆಶ್ರಯದಲ್ಲಿ 2026 ಆಗಸ್ಟ್ ಹತ್ತರಂದು ಬೆಳಿಗ್ಗೆ 11 ಗಂಟೆಗೆ ಶಾಲೆಯ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಭಾರತೀಯ ಸಂತ ಪರಂಪರೆ ಉಪನ್ಯಾಸಮಾಲೆಯ 12ನೇ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜಿಸಲಾಯಿತು. ಮುನ್ನುಡಿಯಾಗಿ ಪ್ರೊಫೆಸರ್ ನಾಗರತ್ನ ರಾವ್ ಅವರು ಭಾರತೀಯ ಸಂತ ಪರಂಪರೆಯಲ್ಲಿ…

Read More

ದೈವಾರಾಧನೆ🙏

ವಿಷಯ:-ಅರ್ಧಲ ದೈವಾರಾಧನೆಯಲ್ಲಿ ಅರ್ಧಲ ಅತೀ ಪ್ರಾಮುಖ್ಯವಾದುದು. ರಾಜOದೈವಗಳಿಗೆ,ಪಂಜುರ್ಲಿ, ಗೆ ಹಾಗೂ ಕೆಲವು ದೈವಗಳಿಗೆ ಹಳದಿ ಬಣ್ಣದ ಅರ್ಧಲ ಮುಖ್ಯ, ಮೊದಲು ಅದನ್ನು ಮುಖಕ್ಕೆ ಹಚ್ಚಿ ನಂತರ ಬೇಕಾದ ಹಾಗೆ ಆಕಾರಗಳನ್ನು ಮಾಡುತ್ತಾರೆ. ಮೊದಲಿನ ಕಾಲದಲ್ಲಿ ಅರ್ಧಲ ನೋಡಿ ಯಾವ ದೈವ ಎಂದು ಹೇಳಲಾಗ ಬಹುದಿತ್ತು. ಈಗ ಅರ್ಧಲದ ಬದಲು, ಹಲವು ರೀತಿಯ ಬಣ್ಣಗಳನ್ನು ಬಳಸುತ್ತಾರೆ. ಗುಳಿಗ ದೈವಕ್ಕೆ ಕಪ್ಪು ಬಣ್ಣ ಮತ್ತು 1001 ಚುಕ್ಕಿ ಬೇಕು ಎಂಬುದು ವಾಡಿಕೆ.ಮುಖಾಂಬಿ ಗುಳಿಗ ದೈವಕ್ಕೆ ಮಲಗಿಸಿ ಅರ್ಧಲ ಹಚ್ಚಬೇಕು ಅದೂ…

Read More

ಕಾಸರಗೋಡಿನಲ್ಲಿ ವಿಎಚ್‌ಪಿ ನೇತೃತ್ವದಲ್ಲಿ ರಾಮಾಯಣ ಸತ್ಸಂಗ

ಕಾಸರಗೋಡು: ಆಷಾಡ ಮಾಸದಲ್ಲಿ ಪ್ರತಿವರ್ಷದಂತೆ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ನೇತೃತ್ವದಲ್ಲಿ ರಾಮಾಯಣ ಸತ್ಸಂಗ ಕಾರ್ಯಕ್ರಮ ಕಾಸರಗೋಡು ಹೃದಯ ಭಾಗದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಿತು. ಹಿರಿಯ ವೈದ್ಯ ಧಾರ್ಮಿಕ ಮುಂದಾಳು ಡಾ| ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವಿಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾl ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಗುಣಪಾಲ ಅಮೈ ಉಪಸ್ಥಿತರಿದ್ದರು. ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕರಾದ ಡಾ|…

Read More

ಬಡ ಮಹಿಳೆಯರಿಗೆ ಬಸ್ ನಿಲ್ಲಿಸದಿರುವುದು ಸರಿಯಲ್ಲ: ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರ ಅಧ್ಯಕ್ಷತೆಯಲ್ಲಿ ‌ತಾ.ಪಂ.ಸಭಾಂಗಣದಲ್ಲಿ ನಡೆಯಿತು.ಕೆಯ್ಯೂರು ಗ್ರಾಮದ ಮುಂಡೂರಿನಲ್ಲಿ ಮಹಿಳೆಗೆ ಬಸ್ಸು ನಿಲ್ಲಿಸದಿರುವುದಕ್ಕೆ ಸಂಬಂಧಿಸಿ ಚಾಲಕನಿಗೆ ನೋಟಿಸ್ ನೀಡಲಾಗಿದೆ ಎಂದು ಕೆಎಸ್ಆರ್ ಟಿಸಿ ಪುತ್ತೂರು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಮಾಹಿತಿ ನೀಡಿದ್ದು, ಈ ವೇಳೆ ಅಧ್ಯಕ್ಷರು ಪ್ರತಿಕ್ರಿಯಿಸಿ ಕೇವಲ ನೋಟಿಸ್ ನೀಡಿದರೆ ಸಾಲುವುದಿಲ್ಲ. ಆ ರೀತಿ ಗ್ರಾಮೀಣ ಭಾಗದಲ್ಲಿ ಬಡ ಮಹಿಳೆಯರು ಕೂಲಿ ಕೆಲಸಕ್ಕೆ ಬಂದು ಮನೆಗೆ ಹಿಂದಿರುಗುವ…

Read More
error: Content is protected !!