ದೇರಂಬಳ ಸೇತುವೆ ಸಮಸ್ಯೆಗೆ ಪರಿಹಾರದ ಭರವಸೆ | ನಮ್ಮ ಮೀಡಿಯಾ 24×7 ವರದಿಗೆ ಸ್ಪಂದನೆ
ನಾಲ್ಕು ವರ್ಷಗಳಿಂದ ಎರಡು ಪಂಚಾಯತ್ಗಳ ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡಿದ್ದ ಈ ಸಮಸ್ಯೆಗೆ ಇದೀಗ ಪರಿಹಾರದ ಭರವಸೆ ದೊರೆತಿದೆ.ಜನರ ಸಮಸ್ಯೆಯನ್ನು ನೇರವಾಗಿ ಬಿಂಬಿಸಿದ್ದ ನಮ್ಮ ಮೀಡಿಯಾ 24×7 ವರದಿಗೆ ಸ್ಪಂದಿಸಿರುವ ಶಾಸಕ ಎಕೆಎಂ ಅಶ್ರಫ್, ಶಾಶ್ವತ ವಾಹನ ಸಂಚಾರದ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮೀಂಜ-ಮಂಗಲ್ಪಾಡಿ ಗ್ರಾಮ ಪಂಚಾಯತ್ಗಳನ್ನು ಸಂಪರ್ಕಿಸುವ ದೇರಂಬಳ ಹೊಳೆಯ ಸೇತುವೆ ಕಳೆದ ನಾಲ್ಕು ವರ್ಷಗಳಿಂದ ಶಿಥಿಲಗೊಂಡು ಬಳಕೆಗೆ ಅಸಾಧ್ಯವಾಗಿತ್ತು.ಮಳೆಗಾಲದಲ್ಲಿ ಹೊಳೆಯ ನೀರಿನ ಪ್ರಮಾಣ ಹೆಚ್ಚಾದಾಗ ವಿದ್ಯಾರ್ಥಿಗಳು, ರೈತರು ಹಾಗೂ…
