ಕಾಸರಗೋಡು: ಜಿಲ್ಲೆಯಲ್ಲೂ ಬಾಧಿಸಿದ ‘ಅಮೀಬಿಕ್ ಮಸ್ತಿಷ್ಕ ಜ್ವರ’ : 18 ವರ್ಷದ ಯುವಕನ ಸ್ಥಿತಿ ಗಂಭೀರ, ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲೂ ಮಾರಣಾಂತಿಕ ‘ಅಮೀಬಿಕ್ ಮಸ್ತಿಷ್ಕ ಜ್ವರ’ ಪ್ರಕರಣ ವರದಿಯಾಗಿದೆ.ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 18 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಸೋಮವಾರ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಈ ರೋಗ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಒಂದು ವಾರದ ಹಿಂದೆ ಯುವಕ ಹಾಗೂ ಆತನ ಸ್ನೇಹಿತರು ಕೊಳವೆಂದರಲ್ಲಿ ಈಜಲು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಕಾಞಂಗಾಡ್-ಪಾಣತ್ತೂರು ರಾಜ್ಯ ಹೆದ್ದಾರಿ ಬದಿಯಲ್ಲಿರುವ ನಿರ್ದಿಷ್ಟ ಕೊಳದಲ್ಲಿ ಸಾರ್ವಜನಿಕರು ಈಜುವುದನ್ನು…
